ಶ್ರವಣಬೆಳಗೂಳ, ಮೇ 17: ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೂಳ ಹೋಬಳಿಯಲ್ಲಿ ‘ಪುನರ್ವಿಕ ಫರ್ನಿಚರ್’ ಶೋರೂಮ್ ಹೊಸದಾಗಿ ಲೋಕಾರ್ಪಣೆಯಾಯಿತು. ಮಾಳೇನಹಳ್ಳಿಯ ನವೀನ್ ಅವರ ಮಾಲಕತ್ವದ ಈ ಶೋರೂಮ್ನ ಉದ್ಘಾಟನೆಯನ್ನು ಶ್ರವಣಬೆಳಗೂಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, “ಗ್ರಾಮಾಂತರ ಪ್ರದೇಶದ ಜನತೆಗೆ ಆಧುನಿಕ ಹಾಗೂ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಶೋರೂಮ್ ಲೋಕಾರ್ಪಣೆಯಾಗಿದೆ. ಸ್ಥಳೀಯ ಜನತೆ ಇದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಪುನರ್ವಿಕ ನವೀನ್, ಟಿಎಪಿಎಂಎಸ್ ಮಾಜಿ ಉಪಾಧ್ಯಕ್ಷ ಸಿ.ಜೆ. ಜಗದೀಶ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಅನುರಾಧ, ಲೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶೋರೂಮ್ ಲೋಕಾರ್ಪಣೆಯ ನಂತರ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಪುನರ್ವಿಕ ಶೋರೂಮ್ನಲ್ಲಿ ವಿವಿಧ ವಿನ್ಯಾಸದ ಫರ್ನಿಚರ್, ಗೃಹ ಉಪಯೋಗಿ ವಸ್ತುಗಳು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಸ್ಥಳೀಯ ಗ್ರಾಹಕರಿಗೆ ಇದು ಅನುಕೂಲಕಾರಿಯಾಗಿ ಪರಿಣಮಿಸಲಿದೆ ಎಂದು ಆಶಿಸಿದ್ದಾರೆ.
