ಹಾಸನ-ಕೆಸರು ಗದ್ದೆಯಂತಾದ ಆದಾಯ ತೆರಿಗೆ ಕಾಲೋನಿ ರಸ್ತೆ- ವಾಹನ ಸವಾರರು-ವಿದ್ಯಾರ್ಥಿಗಳ ಪರದಾಟ

ಹಾಸನದ ಆದಾಯ ತೆರಿಗೆ ಬಡಾವಣೆಯಲ್ಲಿ ಯುಜಿಡಿ ಕಾಮಗಾರಿ ಬಳಿಕ ರಸ್ತೆ ದುರಸ್ಥಿ ಮಾಡದೇ ಉಳಿದ ಪರಿಣಾಮವಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಮಳೆ ಕಾರಣದಿಂದ ಗುಂಡಿಗಳಲ್ಲಿ ನೀರು ತುಂಬಿ, ವಾಹನ ಸವಾರರು ಹಾಗೂ ನಾಗರಿಕರು ಹದಗೆಟ್ಟ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸಬೇಕಾಗಿದೆ. ಸ್ಥಳೀಯರ ಅನೇಕ ಮನವಿಗೂ ಪಾಲಿಕೆ ಹಾಗೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.