ಅಮೆರಿಕದ ಎಫ್-35 ಯುದ್ಧವಿಮಾನ ಖರೀದಿ ಯೋಜನೆ ಕೈಬಿಟ್ಟ ಭಾರತ- ಸುಂಕ ಹೇರಿಕೆಯ ನಡುವೆ ಸ್ವದೇಶೀ ತಂತ್ರಜ್ಞಾನಕ್ಕೂ ಆದ್ಯತೆ

ಭಾರತವು ಅಮೆರಿಕದ ಎಫ್-35 ಯುದ್ಧವಿಮಾನ ಖರೀದಿಯ ನಿರ್ಧಾರದಿಂದ ಹಿಂದೆ ಸರಿದಿದೆ. ಅಮೆರಿಕದ ಶೇ.25ರ ಆಮದು ಸುಂಕ ಹೇರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ, ಜಂಟಿ ತಯಾರಿಕಾ ಪ್ರಸ್ತಾವನೆಗೆ ಅಮೆರಿಕ ಸ್ಪಂದಿಸದ ಕಾರಣ, ತಾನು ಸ್ವತಃ ಐದನೇ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಎಎಂಸಿಎ ಯೋಜನೆ ಆರಂಭಿಸಿದೆ.