ನವದೆಹಲಿ, ಏಪ್ರಿಲ್ 29: ಭಾರತೀಯ ನೌಕಾಪಡೆಯ ಅಗತ್ಯಕ್ಕಾಗಿ 26 ರಫೇಲ್ ವಿಮಾನಗಳನ್ನು (22 ಸಿಂಗಲ್ ಸೀಟರ್ ಮತ್ತು 4 ಡ್ಯೂಯಲ್ ಸೀಟರ್) ಖರೀದಿಸುವ ಅಂತರಸರ್ಕಾರಿ ಒಪ್ಪಂದವನ್ನು ಭಾರತ ಮತ್ತು ಫ್ರಾನ್ಸ್ ನಡುವೆ ಇಂದು ನವದೆಹಲಿಯಲ್ಲಿ ಸಹಿ ಮಾಡಲಾಗಿದೆ.
ಈ ಒಪ್ಪಂದದ ಮೇಲೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ನ ಸಶಸ್ತ್ರ ಪಡೆಗಳ ಸಚಿವ ಶ್ರೀ ಸೆಬಾಸ್ಟಿಯನ್ ಲೆಕೋರ್ನು ಸಹಿ ಹಾಕಿದ್ದು, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಒಪ್ಪಂದದ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ವಿಮಾನಗಳ ವಿತರಣೆಯನ್ನು 2030ರೊಳಗೆ ಪೂರ್ಣಗೊಳಿಸಲಾಗುವುದು.
ರಫೇಲ್-ಮರೀನ್ ಒಂದು ವಿಮಾನ ವಾಹಕ ಜಹಾಜಿನಲ್ಲಿ ಕಾರ್ಯಾಚರಿಸಲು ಸಿದ್ಧವಾದ ಸಮುದ್ರಾಧಾರಿತ ಯುದ್ಧ ವಿಮಾನವಾಗಿದೆ. ಇದರ ಸೇರ್ಪಡೆ ಭಾರತೀಯ ನೌಕಾಪಡೆಯ ವಿಮಾನ ವಾಹಕ ಜಹಾಜುಗಳ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ, ಸಮುದ್ರದಲ್ಲಿ ಭಾರತದ ವಾಯುಶಕ್ತಿಯನ್ನು ಮತ್ತಷ್ಟು ಬಲಪಡಿಸಲಿದೆ.
