ಪಾಕಿಸ್ತಾನ ಮತ್ತು ಭಾರತದ (Pakistan-India) ನಡುವಿನ ಅಸಮಾಧಾನದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಈ ಪರಿಣಾಮ ಭಾರತ-ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಅಲ್ಲದೇ ಪಾಕ್ ಗಡಿಯಲ್ಲಿ ಭಾರತಕ್ಕೆ ತೊಂದರೆಯಾಗುವಂತೆ ತನ್ನ ಬುದ್ಧಿ ತೋರಿಸುತ್ತಲೇ ಇರುತ್ತದೆ.
ಈ ಘಟನೆ ರಾಜಸ್ಥಾನದ ಬಾರ್ಮರ್ನಲ್ಲಿ, ಅಂತರರಾಷ್ಟ್ರೀಯ ಗಡಿಯ ಬಳಿ ಬೆಳಕಿಗೆ ಬಂದಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ, ಪಾಕಿಸ್ತಾನವು ಈ ಗಡಿಯ ಸಮೀಪದಲ್ಲಿ ಮೂರು ಬಂಕರ್ಗಳನ್ನು ಕಟ್ಟಿದೆ. ಆದರೆ ಈ ಮೂರೂ ಬಂಕರ್ಗಳನ್ನು ಪಾಕ್ ಅನಧಿಕೃತವಾಗಿಯೇ ನಿರ್ಮಿಸಿದೆ.
ಇದರ ಬಗ್ಗೆ ಒಂದು ತಿಂಗಳ ಹಿಂದೆ, ಪಾಕಿಸ್ತಾನ ರೇಂಜರ್ಸ್ ಮತ್ತು ಭಾರತೀಯ ಅಧಿಕಾರಿಗಳ ನಡುವೆ ಕಮಾಂಡೆಂಟ್ ಮಟ್ಟದ ಸಭೆಯೂ ನಡೆದಿತ್ತು. ಇನ್ನು ಈ ಸಭೆಯಲ್ಲಿ ಭಾರತೀಯ ಅಧಿಕಾರಿಗಳು ಬಂಕರ್ಗಳ ವಿಷಯ ಮಾತನಾಡಿ, ಇದು ನಿಯಮ ಉಲ್ಲಂಘನೆಯ ಕೆಲಸ ಎಂದು ಹೇಳಿದ್ದಾರೆ.
ಅನಧಿಕೃತ ಬಂಕರ್ ನಿರ್ಮಿಸಿದ ಪಾಕ್!
ವರದಿಯ ಪ್ರಕಾರ, ಭಾರತೀಯ ಕಮಾಂಡರ್ಗಳು ಸಭೆಯಲ್ಲಿ, “ಈ ಬಂಕರ್ಗಳು ಅನಧಿಕೃತ, ಇದನ್ನು ತೆಗೆದುಹಾಕಿ” ಎಂದು ಹೇಳಿದರು. ಆದರೆ ಪಾಕಿಸ್ತಾನವು ಈ ಮಾತನ್ನು ಕೇಳಲೇ ಇಲ್ಲ. ಈ ವೇಳೆ ಭಾರತ ಕೂಡಾ ಪಶ್ಚಿಮ ಗಡಿಯಲ್ಲಿ ಮೂರು ಬಂಕರ್ಗಳನ್ನು ಕಟ್ಟಿತು. ಆದರೆ ಇದು ಪಾಕಿಸ್ತಾನಕ್ಕೆ ಗೊತ್ತಾಗುತ್ತಿದ್ದಂತೆ ಶಾಕ್ ಆಗಿದೆ.
