ಜೈಪುರ್, ಡಿ.1: ಭಾರತ ಮತ್ತು ಬ್ರಿಟನ್ ಸೇನೆಗಳು ಸಂಯುಕ್ತವಾಗಿ ನಡೆಸಿದ ಸೇನಾ ಅಭ್ಯಾಸ ‘ಅಜೇಯ ವಾರಿಯರ್–25’ ಭಾನುವಾರ ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಹದಿನೈದು ದಿನಗಳ ಕಾಲ ನಡೆದ ಈ ಜಂಟಿ ಮಿಲಿಟರಿ ವ್ಯಾಯಾಮ, ಎರಡೂ ದೇಶಗಳ ರಕ್ಷಣಾ ಸಹಕಾರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಯುದ್ಧತಂತ್ರದ ಪರಸ್ಪರ ಸಿನರ್ಜಿ, ವೃತ್ತಿಪರ ಪರಿಣಿತಿ ಮತ್ತು ಜಂಟಿ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಸೇನಾ ವೃತ್ತಪರ ವಲಯಗಳು ತಿಳಿಸಿವೆ.
ಈ ಅಭ್ಯಾಸದ ವೇಳೆ ಎರಡೂ ದೇಶಗಳ ಪಡೆಯು ಸವಾಲಿನ ಯುದ್ಧ ಪರಿಸ್ಥಿತಿಗಳಲ್ಲಿ ಜಂಟಿ ಕಾರ್ಯಾಚರಣೆ, ಆಧುನಿಕ ಯುದ್ಧತಂತ್ರ, ಗುಡ್ಡ ಹಾಗೂ ಮರುಭೂಮಿ ಪ್ರದೇಶಗಳಲ್ಲಿ ಸಮನ್ವಯಿತ ಚಲನಾಶೈಲಿ ಸೇರಿದಂತೆ ಹಲವಾರು ಪ್ರಮುಖ ಸನ್ನಿವೇಶಗಳ ಮೇಲೆ ಕೌಶಲ್ಯಾಭಿವೃದ್ಧಿ ನಡೆಸಿತು.
ಭಾರತ–ಬ್ರಿಟನ್ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ‘ಅಜೇಯ ವಾರಿಯರ್–25’ ಅಭ್ಯಾಸವು ಪ್ರಮುಖ ಘಟ್ಟವೆಂದು ಮಿಲಿಟರಿ ವಲಯಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
