ಭಾರತೀಯ ಕರಾವಳಿ ಗಾರ್ಡಿನಲ್ಲಿ ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಕರಾವಳಿ ಗಾರ್ಡ್‌ನಲ್ಲಿ ನಾವಿಕ್ (ಜಿಡಿ, ಡಿಬಿ) ಮತ್ತು ಯಂತ್ರಿಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟವಾಗಿದೆ. 10ನೇ ಅಥವಾ 12ನೇ ತರಗತಿ ಪಾಸಾಗಿರುವ ಮತ್ತು ತಾಂತ್ರಿಕ ಡಿಪ್ಲೋಮಾ ಹೊಂದಿರುವ ಪುರುಷ ಭಾರತೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಆಯ್ಕೆ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ವಯೋಮಿತಿ 18 ರಿಂದ 22 ವರ್ಷವಾಗಿದೆ. ಮೀಸಲಾತಿ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ವಿನಾಯಿತಿ ದೊರೆಯಲಿದೆ.