ಬೆಂಗಳೂರು, ಅಕ್ಟೋಬರ್ 6: ಭಾರತೀಯ ನೌಕಾಪಡೆ ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಎರಡನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ಐಎನ್ಎಸ್ ‘ಏಂಡ್ರೊತ್’ ಅನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.
ಐಎನ್ಎಸ್ ‘ಏಂಡ್ರೊತ್’ ದೇಶಿನಿರ್ಮಿತ ನೌಕೆಯಾಗಿದ್ದು, ಕೋಲ್ಕತ್ತಾ ಮೂಲದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (ಜಿಆರ್ಎಸ್ಇ) ನಿರ್ಮಿಸಿದೆ. ನೌಕೆಯ ಶೇ 80 ರಷ್ಟು ಭಾಗಗಳು ಸ್ಥಳೀಯವಾಗಿ ತಯಾರಿಸಲಾಗಿದ್ದು, ದೇಶೀಯ ಸಾಮರ್ಥ್ಯವನ್ನು ಉತ್ತೇಜಿಸುತ್ತವೆ.
ಇದನ್ನು ಓದಿ: ರಾಜ್ಯದಲ್ಲಿ ‘ಜಾತಿ ಗಣತಿ’ ಸಮೀಕ್ಷೆ ಅವಧಿ ವಿಸ್ತರಣೆಗೆ ತೀರ್ಮಾನ ಸಾಧ್ಯ – ಸಿಎಂ ಸಿದ್ದರಾಮಯ್ಯ
ಅತ್ಯಾಧುನಿಕ ಯುದ್ಧ ತಂತ್ರಜ್ಞಾನ ಹೊಂದಿರುವ ‘ಏಂಡ್ರೊತ್’ ಸುಧಾರಿತ ಶಸ್ತ್ರಾಸ್ತ್ರಗಳು, ಸೆನ್ಸರ್ಗಳು ಮತ್ತು ಸಂಭವನೀಯ ದಾಳಿಗಳನ್ನು ನಿಖರವಾಗಿ ಪತ್ತೆ ಮಾಡಿ ನಿಷ್ಕ್ರೀಯಗೊಳಿಸುವ ವ್ಯವಸ್ಥೆಯನ್ನು ಹೊಂದಿದೆ. ಈ ನೌಕೆ ಭಾರತೀಯ ನೌಕಾಪಡೆಯ ತಂತ್ರಜ್ಞಾನ ಮತ್ತು ರಕ್ಷಣಾ ಸಾಮರ್ಥ್ಯದಲ್ಲಿ ಮಹತ್ವದ ಬೆಳವಣಿಗೆ ಎತ್ತಿಕೊಂಡಿದೆ.
