
ಉತ್ತಮ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಅಸಾಧಾರಣ ನಾಯಕಿಯರನ್ನು ಗೌರವಿಸುವ ಟೈಮ್ ನಿಯತಕಾಲಿಕೆಯ 2025 ರ ‘ವರ್ಷದ ಮಹಿಳೆಯರು’ ಪಟ್ಟಿಯಲ್ಲಿ, ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞರೊಬ್ಬರು ಸ್ಥಾನ ಪಡೆದಿದ್ದಾರೆ
ಬಿಡುಗಡೆಯಾದ ಟೈಮ್ನ 2025 ರ ವರ್ಷದ ಮಹಿಳೆಯರ ಪಟ್ಟಿಯಲ್ಲಿ 45 ವರ್ಷದ ಪೂರ್ಣಿಮಾ ದೇವಿ ಬರ್ಮನ್ ಕಾಣಿಸಿಕೊಂಡಿದ್ದಾರೆ.
ಈಕೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಮಹಿಳೆ.
ಗ್ರೇಟರ್ ಅಡ್ಜಟಂಟ್ ಕೊಕ್ಕರೆಗಳ ಸಂರಕ್ಷಣೆಯಲ್ಲಿ ಇವರು ಜೀವನ ಮುಡುಪಾಗಿಟ್ಟಿದ್ದಾರೆ.