ದೆಹಲಿ:ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮತ್ತೊಂದು ಹೆಮ್ಮೆಯ ಸಾಧನೆ ದಾಖಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಹೈ-ನಿಖರ ಮತ್ತು ಕಾಂಪ್ಯಾಕ್ಟ್ ಡಯೋಡ್ ಲೇಸರ್ ಅನ್ನು ಐಐಟಿ ದೆಹಲಿ ಇನ್ಕ್ಯುಬೇಟ್ ಆಗಿರುವ ಸ್ಟಾರ್ಟ್ಅಪ್ ಪ್ರೆನಿಷ್ಕ್ ಪ್ರೈವೇറ്റ് ಲಿಮಿಟೆಡ್ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಬೆಂಬಲದೊಂದಿಗೆ ಅಭಿವೃದ್ಧಿ ಕಂಡ ಈ ಅತಿ ಹೈ-ಪ್ರಿಸಿಷನ್ ಲೇಸರ್ ವ್ಯವಸ್ಥೆಯನ್ನು, ನವೆಂಬರ್ 3ರಂದು ನಡೆದ ಎಮರ್ಜಿಂಗ್ ಸೈನ್ಸ್, ಟೆಕ್ನಾಲಜಿ ಮತ್ತು ಇನ್ನೋವೇಶನ್ ಕಾನ್ಕ್ಲೇವ್ – ESTIC 2025 ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ಅಧಿಕೃತವಾಗಿ ಅನಾವರಣ ಮಾಡಲಾಯಿತು.
ಲೇಸರ್ನ ಪ್ರಮುಖ ವೈಶಿಷ್ಟ್ಯಗಳು
- ಅತ್ಯುತ್ತಮ ಕಿರಣದ ಗುಣಮಟ್ಟ
- ಉನ್ನತ ಮಟ್ಟದ ಸ್ಥಿರತೆ
- ದೀರ್ಘಕಾಲೀನ ವಿಶ್ವಾಸಾರ್ಹತೆ
- ಕಾಂಪ್ಯಾಕ್ಟ್ ವಿನ್ಯಾಸ – ಕಡಿಮೆ ತೂಕ
- ಕಡಿಮೆ ವಿದ್ಯುತ್ ಬಳಕೆ
ಉನ್ನತ ನಿಖರತೆಯ ಈ ತಂತ್ರಜ್ಞಾನವು ಸಂಶೋಧನೆ, ಕೈಗಾರಿಕೆ, ವೈದ್ಯಕೀಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಗೆ ದಾರಿಯೊಡ್ಡುವ ಸಾಧ್ಯತೆ ಇದೆ.
ಪ್ರೆನಿಷ್ಕ್ ಸ್ಟಾರ್ಟ್ಅಪ್ನ ಈ ಮಹತ್ವದ ಸಾಧನೆ, “ಮೇಕ್ ಇನ್ ಇಂಡಿಯಾ” ಗುರಿಯತ್ತ ಮತ್ತೊಂದು ಬಲವಾದ ಹೆಜ್ಜೆಯಾಗಿ ಪರಿಣಮಿಸಿದೆ ಎಂದು ತಂತ್ರಜ್ಞಾನ ತಜ್ಞರು ಪ್ರಶಂಸಿಸಿದ್ದಾರೆ.
