
ಬೆಂಗಳೂರು: ಭಾರತದ ಪ್ರಪ್ರಥಮ ಮಹಿಳಾ ಮಾಲೀಕತ್ವದ ಗಾಲ್ಫ್ ಕಂಪನಿಯಾದ 180 ಗಾಲ್ಫ್, ಭಾರತದಲ್ಲಿ ಮಹಿಳಾ ಗಾಲ್ಫ್ ಲೀಗ್ನ ಉದ್ಘಾಟನಾ ಆವೃತ್ತಿಯನ್ನು ಪರಿಚಯಿಸಲು ಹೆಮ್ಮೆಪಡುತ್ತದೆ. ಇದು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಆಯೋಜಿಸಲಾಗಿರುವ ಭಾರತದ ಪ್ರಪ್ರಥಮ ಪ್ರೀಮಿಯರ್ ಗಾಲ್ಫ್ ಲೀಗ್ ಆಗಿರುತ್ತದೆ.
ಮಹಿಳಾ ಗಾಲ್ಫ್ ಲೀಗ್ ಅನ್ನು ತಂಡಗಳ ಆಟದ ಸ್ವರೂಪದಲ್ಲಿ ಸರಣಿ ಪಂದ್ಯಾವಳಿಗಳನ್ನು ಆಯೋಜಿಸುವಂತೆ ರಚಿಸಲಾಗಿದ್ದು, 20, ಹಾಗೂ 27ರಂದು ಬೆಂಗಳೂರಿನ ಗಾಲ್ಫ್ ಕ್ಲಬ್ನಲ್ಲಿ ಪಂದ್ಯಗಳು ನಡೆಯಲಿವೆ. ಪ್ರಪ್ರಥಮ ಆವೃತ್ತಿಯಲ್ಲೇ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ್ದು, 90 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಅವರನ್ನು ಆರು ತಂಡಗಳಾಗಿ ವರ್ಗೀಕರಿಸಲಾಗಿದೆ:
- ಟೀಮ್ ಈಸ್ಟ್ ವೆಸ್ಟ್ ಎಲೈಟ್ಸ್
- ಟೀಮ್ ಗೋಪಾಲನ್ ಜೈಂಟ್ಸ್
- ಟೀಮ್ ರಾಮಯ್ಯ ರಾಯಲ್ಸ್
- ಟೀಮ್ ಮೊರಡೊಮಹಿಳಾಸ್
- ಟೀಮ್ ರಾಜ್ ಇನ್ಫ್ರಾ ಗ್ರೀನ್ ಲೆಜೆಂಡ್ಸ್
- ಟೀಮ್ ಸುದರ್ಶನ್ ಸ್ಟ್ರೈಕರ್ಸ್
- ಭಾರತಾದ್ಯಂತ ಗಾಲ್ಫರ್ಗಳು, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಮೈಸೂರು ಹಾಗೂ ಮಡಿಕೇರಿ ಸೇರಿದಂತೆ ಕೆಲವು ಕೊರಿಯನ್ ಪ್ರಜೆಗಳು ಭಾಗವಹಿಸುತ್ತಿದ್ದಾರೆ. ಇಷ್ಟೊಂದು ಪ್ರಮಾಣದ ಆಟಗಾರರನ್ನು ಗಮನಿಸಿದಲ್ಲಿ ಲೀಗ್ ಹೆಚ್ಚು ಪ್ರಚಾರ ಮತ್ತು ಅಂತಾರಾಷ್ಟ್ರೀಯವಾಗಿ ಅಸ್ತಿತ್ವ ಸಾಧಿಸುವ ಸಾಧ್ಯತೆಯಿದೆ.
ಅಂಜಲಿಅತ್ತಾವರ್ಸಂತೋಷ್, ಸಿಇಒ, 180 ಗಾಲ್ಫ್ಹೇಳಿರುವ ಪ್ರಕಾರ, ‘ನಾವು ಭಾರತದಲ್ಲಿ ಹೆಚ್ಚು ಮಹಿಳೆಯರು ಗಾಲ್ಫ್ ಆಡುವಂತೆ ಪ್ರೋತ್ಸಾಹಿಸುವ ಮೂಲಕ ಗಾಲ್ಫ್ ಆಟದ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶ ಹೊಂದಿದ್ದೇವೆ. ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶಗಳನ್ನು ಒದಗಿಸುವುದು ಹಾಗೂ ಬಲಿಷ್ಠ ಮತ್ತು ಬೆಂಬಲ ನೀಡುವ ಗಾಲ್ಫ್ ಪರಿಸರವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೇವೆ. ಮಾತ್ರವಲ್ಲದೆ, 180 ಗಾಲ್ಫ್ ಭಾರತದಲ್ಲಿ ಮಹಿಳೆಯರ ಗಾಲ್ಫ್ ವಲಯವನ್ನು ಮರುರೂಪಿಸಲಿದೆ. ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುವುದಲ್ಲದೆ, ಶ್ರೇಷ್ಠತೆ, ಕ್ರೀಡಾ ಮನೋಭಾವ ಹಾಗೂ ಪ್ರಗತಿ ಸಾಧಿಸುವ ಸಮುದಾಯವನ್ನು ಸೃಷ್ಟಿಸಲು ಬಯಸಿದ್ದೇವೆ.’
ಕ್ರೀಡೆಯ ಅಗಾಧ ಬೆಳವಣಿಗೆಯ ಸಾಧ್ಯತೆಯನ್ನು ಗುರುತಿಸಿದ ತನೀಶಾ ರೋಹಿರಾ, ಸಮೃದ್ಧಿ ಸುಜೇಶ್, ಅಂಜಲಿ ಅತ್ತಾವರ್ ಹಾಗೂ ಹೇಮಾ ಪ್ರಿಯಾ ಜೊತೆಗೂಡಿ 180ಗಾಲ್ಫ್ ಅನ್ನು ಸ್ಥಾಪಿಸಿದ್ದಾರೆ.
ಅವರು ಜೊತೆಗೂಡಿ ನಂಬಿರುವ ದೃಷ್ಟಿಕೋನವೆಂದರೆ ಭಾರತದ ಮಹಿಳೆಯರಲ್ಲಿ ಗಾಲ್ಫ್ ಆಟದ ಬಗ್ಗೆ ಆಸಕ್ತಿ ಬೆಳೆಸುವುದು. ಪಂದ್ಯಾವಳಿಯನ್ನು ಆಯೋಜಿಸುವುದನ್ನು ಮೀರಿದ ಮಹಾತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಹೆಚ್ಚು ಮಂದಿಗೆ ಗಾಲ್ಫ್ ಆಟ ಪರಿಚಯಿಸುವುದು, ಭಾಗವಹಿಸುವುದನ್ನು ಪ್ರೋತ್ಸಾಹಿಸುವುದು ಹಾಗೂ ಎಲ್ಲರನ್ನೊಳಗೊಂಡ ಗಾಲ್ಫಿಂಗ್ ಸಮುದಾಯವನ್ನು ಬೆಳೆಸುವ ಉದ್ದೇಶವನ್ನು ಅವರು ಹೊಂದಿದ್ದಾರೆ.