Oplus_16908288
ನವದೆಹಲಿ :- ಉಗ್ರರಿಗೆ ಪೋಷಣೆ ನೀಡುತ್ತಿರುವ ಯಾರಿಗೇ ಆದರೂ ನಾವು ಸುಮ್ಮನೇ ಬಿಡುವುದಿಲ್ಲ ಎಂದು ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದರು. ಧರ್ಮ ಕೇಳಿ, ಪೆಹಲ್ಲಾಮ್ನಲ್ಲಿ ಹಿಂದೂ ಪುರುಷರ ನರಮೇಧ ಮಾಡಿದ ಪಾಕಿಸ್ತಾನ ಪೋಷಿತ ಉಗ್ರರು ಅವರಿಗೆ ಬೆಂಬಲ ನೀಡುತ್ತಿರುವ ಎಲ್ಲರೂ ಅವರು ಊಹಿಸಿಕೊಳ್ಳಲು ಅಸಾಧ್ಯವಾಗುವಂಥ ಶಿಕ್ಷೆ ನೀಡುತ್ತೇವೆ ಎಂದು ಮೋದಿ ಹೇಳಿದ್ದರು.
ಅದರಂತೆಯೇ ಇದೀಗ ಪಾಕಿಸ್ತಾನ ಭಾರತದ ಕಾಲಿಗೆ ಬೀಳುವ ಸ್ಥಿತಿ ಎದುರಾಗಿದೆ. ಕದನ ವಿರಾಮದ ಬಳಿಕವೂ ತನ್ನ ಕ್ರೂರ ಚಾಳಿಯನ್ನು ಮುಂದುವರೆಸುವ ದುಸ್ಸಾಹಸ ತೋರಿದ್ದ ಪಾಪಿಸ್ತಾನಕ್ಕೆ, ಭಾರತ ಸರಿಯಾದ ತಿರುಗೇಟು ಕೊಡುವ ಮೂಲಕ, ಈಗ ಗೋಳೋ ಎಂದು ಕಣ್ಣೀರು ಹಾಕುವ ಸ್ಥಿತಿ ಪಾಕ್ಗೆ ಬಂದಿದೆ. ಆದರೆ ಇದರ ಬೆನ್ನಲ್ಲೇ ಇದೀಗ ಟರ್ಕಿಯ ಮೇಲೆಯೂ ಆಪರೇಷನ್ ಶುರು ಮಾಡಿದೆ ಭಾರತ!
ಪಾಕಿಸ್ತಾನಕ್ಕೆ ಗುಟ್ಟಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಟರ್ಕಿ. ಇದು ಭಾರತದ ವಿರೋಧ ಕೃತ್ಯಕ್ಕೆ ಬಳಕೆಯಾಗುವುದಕ್ಕಾಗಿ ಹೀಗೆ ಮಾಡಲಾಗುತ್ತಿದೆ. ತಾವು ಉಗ್ರರಿಗೆ ಸಪೋರ್ಟ್ ಮಾಡುತ್ತಿಲ್ಲ ಎಂದು ರಾಜಾರೋಷವಾಗಿ ಸುಳ್ಳು ಹೇಳಿದ್ದ ಟರ್ಕಿಗೆ ಇದಾಗಲೇ ಭಾರತ ಪಾಠ ಕಲಿಸಲು ಮುಂದಾಗಿದೆ. ಭಾರತ ಮತ್ತು ಟರ್ಕಿಯ ನಡುವೆ ಶತಕೋಟಿ ಡಾಲರ್ಗಳ ಒಪ್ಪಂದವಿದೆ. ಆಟೋಮೊಬೈಲ್ ನಿಂದ ಹಿಡಿದು ಐಟಿ ವರೆಗೆ, ಮೆಟ್ರೋ ರೈಲಿನಿಂದ ಹಿಡಿದು ಸುರಂಗ ಮಾರ್ಗದವರೆಗೆ – ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿ ಹೀಗೆ ಕನಿಷ್ಠ ಐದು ರಾಜ್ಯಗಳಲ್ಲಿ ಟರ್ಕಿಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಟರ್ಕಿಶ್ ಸಂಸ್ಥೆಗಳು ಮತ್ತು ಕಂಪೆನಿಗಳೊಂದಿಗೆ, ವಿವಿಧ ವಲಯಗಳಲ್ಲಿ ಸಹಿ ಮಾಡಲಾದ ಹಲವಾರು ಒಪ್ಪಂದಗಳನ್ನು ಗಣನೆಗೆ ತೆಗೆದುಕೊಂಡರೆ, ದ್ವಿಪಕ್ಷೀಯ ವ್ಯಾಪಾರವು 2024 ಹಣಕಾಸು ವರ್ಷದಲ್ಲಿ 10.4 ಬಿಲಿಯನ್ ಡಾಲರ್ ಆಗಿದೆ.
