ನವದೆಹಲಿ, ನವೆಂಬರ್ 14: 2025ರ ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಇಂಗಾಲ (Carbon Emission) ಹೊರಸೂಸುವಿಕೆಯಲ್ಲಿ ಗುಜರಾತ್, ಒಡಿಶಾ, ಛತ್ತೀಸ್ಗಢ ಮತ್ತು ಜಾರ್ಖಂಡ್ ರಾಜ್ಯಗಳು ಪ್ರಮುಖ ಸ್ಥಾನದಲ್ಲಿವೆ. ಈ ರಾಜ್ಯಗಳಲ್ಲಿ ನಡೆದಿರುವ ಕೈಗಾರಿಕಾ ವಿಸ್ತರಣೆ, ಕಲ್ಲಿದ್ದಲು ಆಧಾರಿತ ಶಕ್ತಿ ಉತ್ಪಾದನೆ ಮತ್ತು ಇಂಧನ ಬಳಕೆ ಇಂಗಾಲ ಹೊರಸೂಸುವಿಕೆಯ ಪ್ರಮುಖ ಕಾರಣಗಳಾಗಿವೆ.
ವರದಿಯ ಪ್ರಕಾರ:
👉🏻 ಗುಜರಾತ್ — ಉತ್ಪಾದನಾ ವಲಯ, ನೈಸರ್ಗಿಕ ಅನಿಲ ಮತ್ತು ದ್ರವ ಇಂಧನಗಳ ವ್ಯಾಪಕ ಬಳಕೆ.
👉🏻 ಒಡಿಶಾ — ಕಲ್ಲಿದ್ದಲು ಆಧಾರಿತ ಬೃಹತ್ ಕೈಗಾರಿಕೆಗಳು ಮತ್ತು ಶಕ್ತಿ ಘಟಕಗಳು.
👉🏻 ಛತ್ತೀಸ್ಗಢ — ಕಲ್ಲಿದ್ದಲು ಗಣಿಗಾರಿಕೆ ಮತ್ತು ಲೋಹ ಸಂಸ್ಕರಣಾ ಘಟಕಗಳು.
👉🏻 ಜಾರ್ಖಂಡ್ — ಕಲ್ಲಿದ್ದಲು ಗಣಿಗಾರಿಕೆ ಹಾಗೂ ಉಕ್ಕು ಉದ್ಯಮದ ಸಾಂದ್ರತೆ.
ಇವುಗಳ ಜೊತೆಗೆ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶ ರಾಜ್ಯಗಳು ಸೌರ ಮತ್ತು ಪವನ ಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ತಮಿಳುನಾಡು ಗಾಳಿ ಶಕ್ತಿ ಮತ್ತು ಹಸಿರು ಹೈಡ್ರೋಜನ್ ಉಪಕ್ರಮಗಳ ಮೂಲಕ ನವೀಕರಿಸಬಹುದಾದ ಇಂಧನ ವಿಸ್ತರಣೆಯನ್ನು ಮುಂದುವರೆಸಿದೆ.
ತಜ್ಞರ ಪ್ರಕಾರ, ಭಾರತದ ಇಂಧನ ಕ್ಷೇತ್ರದ ಇಂಗಾಲ ಹೊರಸೂಸುವಿಕೆ ಒಟ್ಟಾರೆ ಹೊರಸೂಸುವಿಕೆಗಳಲ್ಲಿ ಅತ್ಯಧಿಕ ಪಾಲು ಹೊಂದಿದೆ. ಶಕ್ತಿ ಉತ್ಪಾದನೆಗೆ ಹಸಿರು ತಂತ್ರಜ್ಞಾನಗಳ ಅಳವಡಿಕೆ ಮತ್ತು ನವೀಕರಿಸಬಹುದಾದ ಇಂಧನದ ಪ್ರಮಾಣವನ್ನು ಹೆಚ್ಚಿಸುವುದೇ ಪರಿಸರ ಸಮತೋಲನದ ಪ್ರಮುಖ ದಾರಿ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

[…] ಇದನ್ನು ಓದಿ: ಭಾರತದ ಇಂಗಾಲ ಹೊರಸೂಸುವಿಕೆಯಲ್ಲಿ ಮುಂಚೂಣ… […]