
🔹 ತುಳುವ ವಂಶದ ಪ್ರಸಿದ್ಧ ದೊರೆ= ಶ್ರೀಕೃಷ್ಣದೇವರಾಯ
🔸ಶ್ರೀ ಕೃಷ್ಣದೇವರಾಯ ಅಧಿಕಾರಕ್ಕೆ ಬಂದ ವರ್ಷ= 1509
🔸ಶ್ರೀಕೃಷ್ಣದೇವರಾಯನೊಂದಿಗೆ ಹೋರಾಡಿ ಪ್ರಾಣ ಕಳೆದುಕೊಂಡ ಬಿಜಾಪುರ ಸುಲ್ತಾನ=
ಯೂಸುಫ್ ಆದಿಲ್ ಶಾ(1510ರಲ್ಲಿ )
🔸ಶ್ರೀಕೃಷ್ಣದೇವರಾಯ ನಿಂದ ಸೋತ ಉಮ್ಮತ್ತೂರಿನ ಪಾಳೆಗಾರ= ಗಂಗರಾಜ
( ಇವನಿಂದ ವಶಪಡಿಸಿಕೊಂಡ ಕೋಟೆ ಶಿವನಸಮುದ್ರದ ಕೋಟೆ)
🔹ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಗಳನ್ನು ಗೆದ್ದ ಶ್ರೀಕೃಷ್ಣದೇವರಾಯ ಅವುಗಳನ್ನು ಕೆಂಪೇಗೌಡನಿಗೆ ವಹಿಸಿದನು
🔸ಗೋಲ್ಕೊಂಡದ ಕುತುಬ್ ಶಾನನ್ನು ಸೋಲಿಸಿ ಕಪ್ಪು ವಸೂಲು ಮಾಡಿದ ಕೃಷ್ಣದೇವರಾಯನ ಸೇನಾನಿ= ತಿಮ್ಮರಸ
🔹ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ಸಹಾಯ ನೀಡಿದ ವಿಜಯನಗರ ಅರಸ= ಶ್ರೀಕೃಷ್ಣದೇವರಾಯ
🔸ಕಲ್ಲಿಕೋಟೆ ಗೆಲ್ಲಲು ಪೋರ್ಚುಗೀಸರಿಗೆ ನೆರವಾದ ಅರಸ = ಶ್ರೀಕೃಷ್ಣದೇವರಾಯ
🔹ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರ ಅರಸ ಶ್ರೀಕೃಷ್ಣದೇವರಾಯ
🔹ರಾಯಚೂರು ಕದನದಲ್ಲಿ(1520) ಕೃಷ್ಣದೇವರಾಯನಿಂದ ಸೋತ ಸುಲ್ತಾನ=
ಬಿಜಾಪುರದ ಇಸ್ಮೈಲ್ ಷಾ
🔹ಶ್ರೀ ಕೃಷ್ಣದೇವರಾಯ ಉದಯಗಿರಿ ಕೋಟೆ ಗೆದ್ದ ವರ್ಷ= 1513
🔸ಕಳಿಂಗದ ರಾಜಧಾನಿ ಕಟಕ್ ನ್ನು ಗೆದ್ದ ವರ್ಷ= 1518
🔹 ಕೃಷ್ಣದೇವರಾಯನಿಂದ ಸೋತ ಒರಿಸ್ಸಾದ ಗಜಪತಿ= ಪ್ರತಾಪರುದ್ರ
( ಕೃಷ್ಣದೇವರಾಯನು ಪ್ರತಾಪ ರುದ್ರನ ಮಗಳನ್ನು ಮದುವೆಯಾದನು)
🔸ದಕ್ಷಿಣದ ಚೋಳ ಪಾಂಡ್ಯರನ್ನು ಸೋಲಿಸಿದ ಕೃಷ್ಣದೇವರಾಯನ ಸೇನಾಧಿಪತಿ= ವಿಜಯಪ್ಪ
🔹ಕೃಷ್ಣದೇವರಾಯನಿಂದ ಸೋತ ಬಹುಮನಿ ರಾಜ್ಯದ ಪ್ರಧಾನಿ=
ಕಾಸಿಂ ಬರಿದ
🔸ಅಷ್ಟದಿಗ್ಗಜರು ಎಂಬ ಎಂಟು ಜನರಿಗೆ ಆಶ್ರಯ ನೀಡಿದ ದೊರೆ= ಶ್ರೀಕೃಷ್ಣದೇವರಾಯ
🔹ಭಕ್ತಿ ಸಂತರಾದ ವಲ್ಲಭಾಚಾರ್ಯ ಮತ್ತು ಚೈತನ್ಯ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿದರು.
🔸ಅಮುಕ್ತಮೌಲ್ಯ ಎಂಬ “ತೆಲುಗು” ಕೃತಿಯನ್ನು ಬರೆದವರು= ಶ್ರೀಕೃಷ್ಣದೇವರಾಯ(TET-2021)
🔸 “ಜಾಂಬವತಿ ಕಲ್ಯಾಣ” ಎಂಬ ಸಂಸ್ಕೃತ ನಾಟಕವನ್ನು ಬರೆದವರು= ಶ್ರೀಕೃಷ್ಣದೇವರಾಯ
🔹 “ಕನ್ನಡ ರಾಜ್ಯ ರಮಾರಮಣಿ” ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ= ಶ್ರೀಕೃಷ್ಣದೇವರಾಯ
🔸ಕೃಷ್ಣದೇವರಾಯರ ಗುರುಗಳಾಗಿದ್ದವರು= ವ್ಯಾಸರಾಯರು
🔹ಶ್ರೀಕೃಷ್ಣದೇವರಾಯನು ತನ್ನ ಉದಯಗಿರಿ ವಿಜಯದ ನೆನಪಿಗಾಗಿ ನಿರ್ಮಿಸಿದ ದೇವಾಲಯ=
ಕೃಷ್ಣಸ್ವಾಮಿ ದೇವಾಲಯ