ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಐಐಎಂಎಗೆ 20 ವರ್ಷದ ಸ್ಕಾಲರ್​​ಶಿಪ್ ಸ್ಕೀಮ್

ಎಂಬಿಎ ಕೋರ್ಸ್​​ನ ಮೊದಲ ವರ್ಷದಲ್ಲಿ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್​​ನಲ್ಲಿ  ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಸ್ಕಾಲರ್​​ಶಿಪ್ ಸಿಗುತ್ತದೆ. ಎರಡು ವರ್ಷದ ಕೋರ್ಸ್ ಓದಲು ವಿದ್ಯಾರ್ಥಿಗೆ ಆಗುವ ಎಲ್ಲಾ ವೆಚ್ಚವನ್ನೂ ಈ ಪ್ರೋಗ್ರಾಮ್​​ನಲ್ಲಿ ಭರಿಸಲಾಗುತ್ತದೆ. ಎಲ್ಲಾ ವೆಚ್ಚ ಎಂದರೆ, ತರಗತಿ, ಹಾಸ್ಟೆಲ್, ಊಟ, ಕೋರ್ಸ್ ಮೆಟೀರಿಯಲ್, ಜೀವನ ವೆಚ್ಚ ಇತ್ಯಾದಿ ಎಲ್ಲವೂ ಒಳಗೊಂಡಿರುತ್ತದೆ.