ಅಹ್ಮದಾಬಾದ್: ಇಂದು ( ಜೂನ್ 3 ) ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯ ನಡೆಯಲಿದ್ದು, ಇದೇ ಮೊದಲ ಬಾರಿಗೆ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಪಂದ್ಯದಲ್ಲಿ ರಜತ್ ಪಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಶ್ರೇಯಸ್ ಐಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ತಂಡವನ್ನು ಬೆಂಬಲಿಸಿದರೆ, ಅತ್ತ ಪಂಜಾಬ್ ಫ್ಯಾನ್ಸ್ ತಮ್ಮ ನೆಚ್ಚಿನ ತಂಡವೇ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲಿ ಎಂದು ಆಶಿಸಿದ್ದಾರೆ.
ಈ ಮಹಾ ಕದನ ನಡೆಯಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಿದ ಕಾರಣ ಇಂದಿನ ಪಂದ್ಯದಲ್ಲೂ ಮಳೆ ಬರಬಹುದಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲೆದ್ದಿದ್ದು, ಒಂದುವೇಳೆ ಇಂದು ಮಳೆಗೆ ಪಂದ್ಯ ನಡೆಯದಿದ್ದರೆ ನಾಳೆ ( ಜೂನ್ 4 ) ಮೀಸಲು ದಿನ ನಡೆಯಲಿದೆ.
ಮೀಸಲು ದಿನವೂ ಮಳೆಯಾಗಿ ಪಂದ್ಯ ರದ್ದಾದರೆ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಪಂಜಾಬ್ ಕಿಂಗ್ಸ್ಗೆ ಟ್ರೋಫಿ ಸಿಗಲಿದೆ.
ಅದರೆ ಈ ಬಾರಿ ಮಳೆ ಆತಂಕದಿಂದಾಗಿಯೇ ಹೆಚ್ಚುವರಿ 2 ಗಂಟೆಗಳ ಕಾಲ ಆಟಕ್ಕೆ ಅವಕಾಶ ನೀಡಲಾಗಿದ್ದು, ಎರಡು ಗಂಟೆ ತಡವಾಗಿ ಪಂದ್ಯ ಆರಂಭವಾರೂ ಪೂರ್ಣ ಓವರ್ನ ಪಂದ್ಯ ನಡೆಯಲಿದೆ.
