ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್-ಬಿಸಿಸಿಐ 

ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17 ರಿಂದ ಲೀಗ್ ಮತ್ತೆ ಪ್ರಾರಂಭವಾಗಲಿದ್ದು, ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.