
ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ. ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನದಿಂದಲಷ್ಟೇ ಅದು ಸಾಧ್ಯ. ನಮ್ಮ ಬಾಯಿ ಚಪಲವೇ ದಿನಕ್ಕೊಂದು ಹೊಸ ರೋಗವನ್ನು ಆಹ್ವಾನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ದಿಢೀರ್ ತಿಂಡಿಗಳು, ಸಿದ್ಧ ಆಹಾರಗಳು ಮತ್ತು ಚೈನೀಸ್ ತಿಂಡಿಗಳ ಹಾವಳಿ ತಾರಕಕ್ಕೇರಿದೆ. ಅತಿ ಹೆಚ್ಚು ಕೊಬ್ಬು, ಕ್ಯಾಲರಿ, ಲವಣಗಳಿಂದ ಕೂಡಿದ ಕನಿಷ್ಠ ಪೋಷಕಾಂಶ ಹಾಗೂ ಪೌಷ್ಠಿಕಾಂಶ ಹೊಂದಿರುವ ಈ ಆಹಾರವನ್ನು ಜಂಕ್ಪುಡ್ ಎನ್ನಲಾಗುತ್ತದೆ. ಇವೆಲ್ಲವನ್ನೂ ರುಚಿಕರವಾಗಿರಿಸಲು ಬಳಸುವ ರಾಸಾಯನಿಕವೇ ನಮ್ಮ ಈಗಿನ ಮಕ್ಕಳ ಮತ್ತು ಯುವ ಜನರ ಆರೋಗ್ಯಕ್ಕೆ ಮಾರಕವಾದ ಅಜಿನಾಮೋಟೊ.
ಏನಿದು ಅಜಿನಾಮೋಟೊ?
ಫಾಸ್ಟ್ಫುಡ್ ಅಥವಾ ಚೈನೀಸ್ ಫುಡ್ ಜಾಯಿಂಟ್ಗಳಲ್ಲಿ ರುಚಿಗಾಗಿ ಬಳಸುವ ಮೋನೋ ಸೋಡಿಯಂ ಗ್ಲುಟಾಮೇಟ್ ಎಂಬ ರಾಸಾಯನಿಕವೇ ಖಳನಾಯಕ. ಇದೊಂದು ಆಹಾರವನ್ನು ರುಚಿಯಾಗಿರಿಸುವ ಪದಾರ್ಥ.
ಚೈನೀಸ್ ಫಾಸ್ಟ್ ಫುಡ್ನಲ್ಲಂತೂ ಇದನ್ನು ಬೆರೆಸದಿದ್ದರೆ, ನಮ್ಮ ನಾಲಗೆಗೆ ಆ ಫ್ರೆ„ಡ್ ರೈಸ್ನ ರುಚಿ, ನೂಡಲ್ಸ್ನ ರುಚಿ ಖಂಡಿತ ಬರುವುದೇ ಇಲ್ಲ. MSG ಎಂದು ಕರೆಸಿಕೊಳ್ಳುವ ಇದು, ಎಲ್ಲ ಸಿದ್ಧ ಮತ್ತು ದಿಢೀರ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮಾಲ್ಗಳಲ್ಲಿ, ಬೇಕರಿಗಳಲ್ಲಿ, ಫಾಸ್ಟ್ ಫುಡ್ಗಳಲ್ಲಿ ದೊರೆಯುವ, ಮುಚ್ಚಿದ ತಗಡಿನ ಡಬ್ಬಗಳಲ್ಲಿ ಮಾರಾಟವಾಗುವ ಬಹುತೇಕ ಪದಾರ್ಥಗಳಲ್ಲಿ ಅಧಿಕವಾಗಿ ಇದನ್ನು ಬಳಸುತ್ತಾರೆ.
1908ರಲ್ಲಿ ಜಪಾನಿ ಸಂಶೋಧಕ ಕಿಕುನೆ ಇಕೆಡಾ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ. ಆ್ಯಂಕ್ಸೆಂಟ್ ಎಂದು ಕರೆಯಲಾದ ಕಡಲೊಳಗಿನ ಸಸ್ಯ ಬಳ್ಳಿಗಳ ರಸದಿಂದ ತಯಾರಿಸಿದ ಇದಕ್ಕೆ ನೈಸರ್ಗಿಕ ರುಚಿ ತರಿಸುವ ಶಕ್ತಿ ಇದೆ. ಇದನ್ನು ಅವಿಷ್ಕರಿಸಿ ಸೃಷ್ಟಿಸಿದ್ದೇ ಅಜಿನಾಮೋಟೊ.
ಇದರಲ್ಲಿ 78% MSGಟಾಮಿಕ್ ಆ್ಯಸಿಡ್ ಮುಕ್ತ ರೂಪದಲ್ಲಿ ಇದೆ. 21% ಸೋಡಿಯಂ ಮತ್ತು 1% ಕಲ್ಮಷಗಳಿವೆ. ಈ ರಾಸಾಯನಿಕ, ರುಚಿ ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ನೀರು ಕುಡಿಯುತ್ತದೆ.
ಹೆಸರೇ ಸೂಚಿಸಿದಂತೆ ಎಕ್ಸೆಟೋ ಟಾಕ್ಸಿನ್. ಖ್ಯಾತ ನರತಜ್ಞ ಡಾ| ರಸ್ಸೆಲ್ ಬ್ಲೆಲಾಕ್ ಅವರ ಪ್ರಕಾರ ಈ MSG ಮೊದಲಾಗಿ ನರಮಂಡಲಕ್ಕೇ ದಾಳಿ ಮಾಡುತ್ತದೆ. ಈ MSG ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ. ಆ ಬಳಿಕ ಕಣ್ಣು ನೋವು, ತಲೆನೋವು, ಸುಸ್ತು, ಆಯಾಸ, ನಿರಾಶಕ್ತಿ, ಊಟ ಸೇರದಿರುವುದು, ಅಜೀರ್ಣ, ಖನ್ನತೆಯಿಂದ ಬಳಲುತ್ತಾರೆ. ಮೆದುಳು ಶಕ್ತಿ ಹೀನವಾಗಬಹುದು.
ಗರ್ಭಿಣಿ ಹೆಂಗಸರಂತೂ ಇದರಿಂದ ದೂರವಿದ್ದಷ್ಟೂ ಒಳ್ಳೆಯದು. ಇದರ ಹೆಚ್ಚು ಬಳಕೆಯಿಂದ ದೇಹದೊಳಗಿನ ಸಹಜ ನೀರಿನ ಅಂಶ ಕಡಿಮೆಯಾಗಿ ಸದಾ ತಲೆನೋವು, ಅತಿಯಾಗಿ ಬೆವರುವಿಕೆ, ತಲೆ ಸುತ್ತುವಿಕೆ, ಮುಖ ಊದುವುದು, ಚರ್ಮ ಬಿಗಿಯಾಗುವುದು, ಅತಿಯಾದ ಹೊಟ್ಟೆ ಹುರಿ, ಮೂತ್ರಭಾದೆ, ಕಿಬ್ಬೊಟ್ಟೆನೋವು, ವಾಂತಿ ಭೇಂದಿ, ಮೂಳೆ ಮತ್ತು ಸ್ನಾಯುಗಳಲ್ಲಿ ನೋವು, ರಕ್ತಹೀನತೆ, ರಕ್ತದೊತ್ತಡ, ಎದೆ ಬಡಿತ ಜಾಸ್ತಿಯಾಗುವುದು ಸಾಮಾನ್ಯ.
ನಾವು ತಿನ್ನುವ ಆಹಾರ ಎನ್ನುವುದು ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಕ್ಯಾಲ್ಸಿಯಂ, ಪೋ›ಶರ್ಕರಪಿಷ್ಠ, ಲವಣಾಂಶ, ಕೊಬ್ಬು ಹೇಗೆ ಎಲ್ಲವನ್ನು ಹಿತಮಿತವಾಗಿ ಹೊಂದಿರುವ ಸಮತೋಲನವಿರುವ ಆಹಾರವನ್ನು ನಾವು ಸೇವಿಸಬೇಕು. ಹಸಿ ತರಕಾರಿ, ತಾಜಾ ಹಣ್ಣು ಹಂಪಲುಗಳು, ನೈಸರ್ಗಿಕ ಪೇಯಗಳಾದ ಹಣ್ಣಿನ ರಸ, ಎಳನೀರು, ಕಬ್ಬಿನ ರಸ, ಯಥೇಚ್ಛವಾದ ನೀರಿನ ಬಳಕೆ ಇವೆಲ್ಲವೂ ಆರೋಗ್ಯಕ್ಕೆ ಪೂರಕ. ಸಿದ್ಧ ಪೇಯಗಳಾದ ಇಂಗಾಲಯುಕ್ತ ಕೋಕ್, ಪೆಪ್ಸಿ, ಮಿರಿಂಡಾ ದಂತಹ ಸಿದ್ಧ ಪೇಯಗಳು ಮತ್ತು ಲೆಸ್, ಕುರುಕುರೆ ಮುಂತಾದ ಸಿದ್ಧ ಆಹಾರಗಳು ಸರ್ವಥಾ ಸಲ್ಲದು.
ಆರೋಗ್ಯವೇ ಭಾಗ್ಯ- ಆ ಭಾಗ್ಯವನ್ನು ಕಳೆದುಕೊಳ್ಳದಿರಿ- ಆಸ್ಪತ್ರೆ ಸೇರದಿರಿ .