ಹಾಸನ: ನಗರದ ತಣ್ಣೀರುಹಳ್ಳ ಮಠದಲ್ಲಿ ಧಾರ್ಮಿಕ ಭಾವಭರಿತ ಇಷ್ಟಲಿಂಗ ಪೂಜೆ ಹಾಗೂ ಉಚಿತ ಲಿಂಗಧಾರಣೆ ಕಾರ್ಯಕ್ರಮವನ್ನು ಏಪ್ರಿಲ್ 25, 2026ರ ಶನಿವಾರ ಬೆಳಿಗ್ಗೆ 6 ಗಂಟೆಗೆ ಆಯೋಜಿಸಲಾಗಿದೆ.
ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರಸ್ವಾಮಿಜಿಯವರ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ರಾಜಪುರ ಮಠದ ಶ್ರೀ ಸಿ. ನಟರಾಜ್ ಅವರು ಸಮ್ಮುಖವಹಿಸಲಿದ್ದಾರೆ. ರಾಜ್ಯಾಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 108 ವಟುಗಳಿಗೆ ಲಿಂಗ, ಕರಡಿಗೆ, ಶಿವದಾರ ಹಾಗೂ ಟವಲ್ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 24ರ ಸಂಜೆ ಮಠದ ಸಭಾಂಗಣದಲ್ಲಿ ಭಾಗವಹಿಸುವವರು ತಂಗುವ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಏಪ್ರಿಲ್ 22ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಹಾಸನ ಜಿಲ್ಲಾ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷರಾದ ಹಳ್ಳಿಮೈಸೂರು ಪ್ರಕಾಶ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಣ್ಣೀರುಹಳ್ಳ ಮಠದ ಶಿಷ್ಯರಾದ ಕೆ.ಬಿ. ಜಗದೀಶ್ (9481593142), ಗುರುಪಾದಸ್ವಾಮಿ (9980052448), ಎಂ.ಎನ್. ಕುಮಾರಸ್ವಾಮಿ (9448863158) ಹಾಗೂ ಪ್ರಕಾಶ್, ಹಳ್ಳಿಮೈಸೂರು (9845557817) ಅವರನ್ನು ಸಂಪರ್ಕಿಸಬಹುದು.
– ಕುಮಾರಸ್ವಾಮಿ ಎಂ.ಎನ್.
