ಟೆಲ್ಅವಿವ್ : ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ, ಇದರ ನಡುವೆಯೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಇರಾನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಇರಾನ್ನ ಇಸ್ಲಾಮಿಕ್ ಆಡಳಿತವು ಹಲವರನ್ನು ತನ್ನ ಪರಮಾಣು ಕಾರ್ಯಕ್ರಮಕ್ಕೆ ಅಡ್ಡಿ ಎಂದು ಪರಿಗಣಿಸಿದೆ. ಇದರಲ್ಲಿ ಡೊನಾಲ್ಡ್ ಟ್ರಂಪ್ ಅವರು ಇರಾನ್ ರ ನಂಬರ್ ಒನ್ ಶತ್ರು ಇರಾನ್ ಭಾವಿಸಿದ್ದು ಅವರನ್ನು ಕೊಲ್ಲಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಟ್ರಂಪ್ ನಿಜಕ್ಕೂ ನಿರ್ಣಾಯಕ ನಾಯಕ. ಇತರರಂತೆ ಅವರೆಂದಿಗೂ ದುರ್ಬಲ ರೀತಿಯಲ್ಲಿ ಚೌಕಾಶಿ ಮಾರ್ಗವನ್ನು ಅವರು ಎಂದಿಗೂ ಅನುಸರಿಸಲಿಲ್ಲ, ಪರಮಾಣು ಬಾಂಬ್ ಗೆ ಅತ್ಯಗತ್ಯವಾದ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ತಂತ್ರಜ್ಞಾನವನ್ನು ಅಮೆರಿಕದವರೇ ಅವರಿಗೆ ನೀಡಿದರು ಎಂದು ನೆತನ್ಯಾಹು ಹೇಳಿದ್ದಾರೆ.
ಇರಾನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ತಡೆಯುವ ಪ್ರಯತ್ನದಲ್ಲಿ ತಮ್ಮನ್ನು ಟ್ರಂಪ್ನ ಕಿರಿಯ ಪಾಲುದಾರ ಎಂದು ಕರೆದುಕೊಂಡಿರುವ ಬೆಂಜಮೀನ್ ನೆತನ್ಯಾಹು, ಇಸ್ರೇಲ್ ಗೆ ಪರಮಾಣು ಬಾಂಬ್ ದಾಳಿಯ ಬೆದರಿಕೆ ಬಂದಿದೆ. ಇದಕ್ಕೆ ಪ್ರತಿಯಾಗಿ ನಾವು ಕೂಡ 12 ಗಂಟೆಯಲ್ಲಿ ದಾಳಿ ನಡೆಸುತ್ತವೆ ಅದು ಬಿಟ್ಟು ಬೇರೆ ದಾರಿಯಿಲ್ಲ ಎಂದು ತಿಳಿಸಿದರು.
