ನವದೆಹಲಿ, ಜುಲೈ 11 – ಜಪಾನ್ ಮತ್ತೊಮ್ಮೆ ಇಂಟರ್ನೆಟ್ ತಂತ್ರಜ್ಞಾನದಲ್ಲಿ ನೂತನ ದಾಖಲೆ ಬರೆದಿದ್ದು, ಭವಿಷ್ಯದ ಸಂಪರ್ಕವನ್ನು ಮರು ವ್ಯಾಖ್ಯಾನಿಸುವ ಮಟ್ಟದ ವೇಗ ಸಾಧನೆ ಮಾಡಿದೆ.
ಜಪಾನ್ನ ರಾಷ್ಟ್ರೀಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆ (NICT), ಸುಮಿಟೊಮೊ ಎಲೆಕ್ಟ್ರಿಕ್ ಮತ್ತು ಯುರೋಪಿಯನ್ ಸಂಶೋಧಕರ ಸಹಯೋಗದೊಂದಿಗೆ, ಪ್ರತಿ ಸೆಕೆಂಡಿಗೆ 1.02 ಪೆಟಾಬಿಟ್ಸ್ (Pbps) ವೇಗದ ಡೇಟಾ ಪ್ರಸರಣ ಸಾಧನೆಯಿಂದ ಇಂಟರ್ನೆಟ್ ಜಗತ್ತಿಗೆ ಹೊಸ ಮಾದರಿ ನೀಡಿದೆ.
ಅದ್ಭುತವೇನುಂದರೆ…!
ಈ ಅಂಕಿ ಅಷ್ಟರಲ್ಲ, ಈ ವೇಗದ ಜೊತೆಗೆ ಇಡೀ ನೆಟ್ಫ್ಲಿಕ್ಸ್ ಲೈಬ್ರರಿಯನ್ನು ಒಂದೇ ಸೆಕೆಂಡಿನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ ಎಂಬುದು ಇದರಲ್ಲಿ ಅಚ್ಚರಿ ಅಂಶ. ಇದು ಭಾರತದ ಸರಾಸರಿ ಇಂಟರ್ನೆಟ್ ವೇಗಕ್ಕಿಂತ 1.6 ಕೋಟಿ ಪಟ್ಟು ವೇಗವಾದರೆ, ಅಮೆರಿಕದ ಸರಾಸರಿಗಿಂತ 35 ಲಕ್ಷ ಪಟ್ಟು ವೇಗವಾಗಿದೆ.
ಇದನ್ನು ಓದಿ: ಹೃದಯ ಸೇಫ್: ಹಾಸನದಲ್ಲಿ ಆತಂಕ ಬೇಡ – ಹೃದಯಾಘಾತದ ಸಂಖ್ಯೆ ಹೆಚ್ಚಳವಲ್ಲ!
ತಂತ್ರಜ್ಞಾನದಲ್ಲಿ ಕ್ರಾಂತಿ
ಈ ಸಾಧನೆಯ ಹಿನ್ನಲೆಯಲ್ಲಿ 19 ಕೋರ್ಗಳಿಂದ ಕೂಡಿದ ವಿಶೇಷ ಫೈಬರ್ ಆಪ್ಟಿಕ್ ಕೇಬಲ್ ಬಳಸಲಾಗಿದೆ. ಈ ನವೀನ ಕೇಬಲ್ ಹಲವಾರು ಡೇಟಾ ಸ್ಟ್ರೀಮ್ಗಳನ್ನು ಒಂದೇ ವೇಳೆಯಲ್ಲಿ ಸಾಗಿಸಲು ಸಾಮರ್ಥ್ಯ ಹೊಂದಿದ್ದು, ಪ್ರಸರಣದ ದಿಕ್ಕಿನಲ್ಲಿ ಕ್ರಾಂತಿಯುಂಟುಮಾಡಿದೆ.
ಪರಿಣಾಮ ಏನು?
ಇಂತಹ ಸಾಧನೆಗಳು ಭವಿಷ್ಯದ 6G ಸಂಪರ್ಕ, ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಡೇಟಾ ಸಂವಹನ, ಹಾಗೂ ದಿಟ್ಟ AI ಮಾದರಿಗಳ ತರಬೇತಿಗೆ ಹೊಸ ದಾರಿಗಳನ್ನು ತೆರೆದಿಡುತ್ತವೆ. ಆದರೆ ಈ ತಂತ್ರಜ್ಞಾನ ಸಾಮಾನ್ಯ ಬಳಕೆದಾರರ ಕೈಗೆ ಬರುವ ತನಕ ಇನ್ನೂ ಕಾಲ ಬೇಕಾಗಬಹುದು.

[…] […]
[…] […]
[…] […]