ಕೆ.ಆರ್.ಪೇಟೆ,ಫೆ.23: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 11ಮಂದಿ ನಿರ್ದೇಶಕರ ಆಯ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 11ಸ್ಥಾನಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಬಾರಿಸಿದ್ದಾರೆ. ಪ್ರತಿಸ್ಪರ್ಧಿಗಳಾದ ವಿರೋಧ ಪಕ್ಷಗಳ ಎಲ್ಲಾ ಅಭ್ಯರ್ಥಿಗಳು ಒಂದೂ ಸ್ಥಾನ ಗಳಿಸದೇ ಪರಾಭವಗೊಂಡಿದ್ದಾರೆ.
ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ಚುನಾವಣೆ ಪ್ರಕ್ರಿಯೆ ನಡೆಸಿದ್ದರು. 3ಸ್ಥಾನಗಳಿಗೆ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆ ಆಯ್ಕೆಯಾಗಿದ್ದರು. ಉಳಿದ 8ಸ್ಥಾನಗಳಿಗೆ ನಡೆದ ಮತದಾನದಲ್ಲಿ 8ಸ್ಥಾನಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲುವ ಮೂಲಕ ಶಾಸಕ ಹೆಚ್.ಟಿ.ಮಂಜು ಅವರಿಗೆ ಶಕ್ತಿ ತುಂಬಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳು: ಭಾರತಿ.ಎಂ.ಎಸ್.ಯೋಗೇಂದ್ರ, ರೇಣುಕಾಮಂಜು, ನಿಂಗಮ್ಮಸೋಮೇಗೌಡ, ವರಲಕ್ಷ್ಮೀ ಶಿವರಾಮ್, ನೇತ್ರಾರಾಮೇಗೌಡ, ಯಶೋಧರಮೇಶ್, ಮಣಿಯಮ್ಮ ಶಿವಲಿಂಗೇಗೌಡ, ಪ್ರಮೀಳಾರಾಮಚಂದ್ರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ನೇತ್ರಮ್ಮ ನಾರಾಯಣಚಾರ್, ಸುಂದರಮ್ಮರವಿ, ಪ್ರಭಾವತಿಸ್ವಾಮಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಹೇಮಲತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಚಂದ್ರಪ್ರಭ ಕಾರ್ಯನಿರ್ವಹಣೆ ಮಾಡಿದರು.

ನೂತನ ನಿರ್ದೇಶಕರನ್ನು ಶಾಸಕ ಹೆಚ್.ಟಿ.ಮಂಜು, ಗ್ರಾಮ ಪಂಚಾಯಿತಿ ಸದಸ್ಯ ಎಮ್.ಕೆ.ಯೋಗೇಂದ್ರ, ಮುಖಂಡರಾದ ರಮೇಶ್, ರೇವಣ್ಣ, ಆರ್.ಕುಮಾರ್, ಅನಿಲ್ಕುಮಾರ್, ಜಗದೀಶ್, ರವಿಕುಮಾರ್, ಶ್ರೀಧರ್, ದಿಲೀಪ್, ಯೋಗೇಂದ್ರ, ಸಣ್ಣಮರೀಗೌಡ, ಹರೀಶ್, ಎಂ.ಎಸ್.ಸುಧಾಕರ್, ಸಚಿನ್, ನಾರಾಯಣಚಾರ್, ಸೋಮು, ಅಶೋಕ್, ವಿಜೇಂದ್ರ, ಮನು, ಚೇತನ್, ಶಿವಮೂರ್ತಿ, ದಿನೇಶ್, ಮಂಜು, ಎಂ.ಕೆ.ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಹಾಲು ಉತ್ಪಾದಕರು, ಶೇರುದಾರರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.
ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಮಾಚಗೋನಹಳ್ಳಿ ಗ್ರಾಮಸ್ಥರು ನಮ್ಮ ಜೆಡಿಎಸ್ ಪಕ್ಷದ ಎಲ್ಲಾ 11ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಶಕ್ತಿಯನ್ನು ಹೆಚ್ಚಿಸಿದ್ದೀರಿ. ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಿರುವ ಮಾಜಿ ಶಾಸಕರಾಗಿ ದಿ.ಎಂ.ಕೆ.ಬೊಮ್ಮೇಗೌಡರ ಸ್ವಗ್ರಾಮವಾಗಿರುವ ಮಾಚಗೋನಹಳ್ಳಿ ಗ್ರಾಮಸ್ಥರು ನಮ್ಮ ಜೆಡಿಎಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಭರ್ಜರಿ ಗೆಲುವು ನೀಡಿದ್ದೀರಿ. ಈ ಗೆಲುವು ಮಾಚಗೋನಹಳ್ಳಿ ಗ್ರಾಮದ ಎಲ್ಲಾ ನನ್ನ ತಂದೆ-ತಾಯಿಗಳ ಗೆಲುವಾಗಲಿದೆ.
ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಗ್ರಾಮದ ಎಲ್ಲಾ ಜೆಡಿಎಸ್ ಪಕ್ಷದ ಮುಖಂಡರಿಗೆ ಹಾಗೂ ಹಾಲು ಉತ್ಪಾದಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಜೆಡಿಎಸ್ ಪಕ್ಷವು ತಾಲ್ಲೂಕಿನಲ್ಲಿ ಸದೃಢವಾಗಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಇದು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಹಾಗೂ ಜಿ.ಪಂ.ತಾ.ಪಂ.ಚುನಾವಣೆಯಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿದೆ.
ಇದೇ ರೀತಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಜೆಡಿಎಸ್ ಪಕ್ಷವನ್ನು ಸಂಘಟಿಸಲು ಪಕ್ಷದ ಮುಖಂಡರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಮಾಚಗೋನಹಳ್ಳಿ ಗ್ರಾಮಕ್ಕೆ ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಂಗನವಾಡಿ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿಗೆ ಅನುಧಾನ ನೀಡಲಾಗಿದೆ. ಮತ್ತಷ್ಟು ಅನುಧಾನ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಲಾಗುವುದು. ಇದೇ ರೀತಿಯ ಬೆಂಬಲ ಅಶೀರ್ವಾದ ನಮ್ಮ ಜೆಡಿಎಸ್ ಪಕ್ಷದ ಮೇಲಿರಲಿ ಎಂದು ಶಾಸಕರು ಮನವಿ ಮಾಡಿದರು.
– ಶ್ರೀನಿವಾಸ್ ಆರ್.
