
ಮಂಡ್ಯ.– ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಮೆ|| ಕೆ. ಎಸ್ ವರ್ಲ್ಡ್ ವೆಂಚರ್ಸ್ , ಮೆ|| ಟೆಕ್ ಮಹಿಂದ್ರಾ ಫೌಂಡೇಶನ್, ಮೆ|| ಸಮರ್ಥನಂ ಟ್ರಸ್ಟ್, ಮೆ|| ಐ ಪ್ರೊಸೆಸ್ ಸರ್ವಿಸ್ ಇಂಡಿಯಾ ಪ್ರೈ, ಲಿ, ಮತ್ತು ಮೆ|| ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ, ಲಿ ಸಂಸ್ಥೆಯವರು ತಮ್ಮಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ಉದ್ಯೋಗಮೇಳ ನಡೆಸುತ್ತಿದ್ದು, ಆಸಕ್ತರು ಮಾರ್ಚ್ 7 ರಂದು ಬೆಳಗ್ಗೆ 10:00 ಗಂಟೆಗೆ ಆರ್. ಟಿ. ಓ ಕಛೇರಿ ಎದುರು ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ರೆಸುಮೆ / ಬಯೋಡೇಟಾಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ವಿಷುವಲ್ ಮರ್ಚಂಡೈಸರ್, ಸಪ್ಲೈ ಚೈನ್ ಎಕ್ಸಿಕ್ಯೂಷನ್ ಮತ್ತು ವೇರ್ ಹೌಸ್ ಆಪರೇಟರ್ ಎಕ್ಸಿಕ್ಯೂಟಿವ್, ಮೊಬೈಲೈಸರ್, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಕಸ್ಟಮರ್ ರಿಲೇಷನ್ಷಿಪ್ ಎಕ್ಸಿಕ್ಯೂಟಿವ್ ಖಾಲಿಯಿರುವ ಹುದ್ದೆಗಳಾಗಿದ್ದು 18 ರಿಂದ 35 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೋಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ. ರ 08232-295124/ 9164642684/ 8970646629/ 8660061488 ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.