ಕೆ.ಆರ್.ಪೇಟೆ: ತಾಲ್ಲೂಕಿನ ಪತ್ರಕರ್ತ ಹೊಸಹೊಳಲು ರಘು ಅವರ ಸುಪುತ್ರಿ ನಿಸರ್ಗ ಹೆಚ್.ಆರ್. ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 557 ಅಂಕಗಳನ್ನು ಗಳಿಸಿ ಶೇ.93ರಷ್ಟು ಫಲಿತಾಂಶದೊಂದಿಗೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನಿಸರ್ಗ ಅವರ ಈ ಸಾಧನೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಸ್ನೇಹಿತರಲ್ಲಿ ಸಂತಸ ಮೂಡಿಸಿದ್ದು, ಅವರ ಶೈಕ್ಷಣಿಕ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದುಬರುತ್ತಿವೆ. ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದ ಫಲವಾಗಿ ಈ ಉತ್ತಮ ಫಲಿತಾಂಶ ಲಭಿಸಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಕೆಗಳು ವ್ಯಕ್ತವಾಗಿವೆ.
