ಬೆಂಗಳೂರು: ವಿಶ್ವದ ಮೆಚ್ಚಿನ ಆಭರಣ ಬ್ರ್ಯಾಂಡ್ ಆಗಿರುವ ಜೋಯಾಲುಕ್ಕಾಸ್ (Joyalukkas) ಸಂಸ್ಥೆಯು ಎಂ.ಜಿ.ರೋಡ್, ಬೆಂಗಳೂರಿನ ತನ್ನ ಶೋರೂಮ್ನಲ್ಲಿ ಭವ್ಯವಾದ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಅನ್ನು ಶುಭಾರಂಭಗೊಳಿಸಿದೆ. ವಜ್ರಾಭರಣಗಳ ವೈಶಿಷ್ಟ್ಯಪೂರ್ಣ ಸಂಗ್ರಹವನ್ನು ಪರಿಚಯಿಸುವ ಈ ಶೋಗೆ ಗಣ್ಯರು ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿತು.
ಕಾರ್ಯಕ್ರಮದಲ್ಲಿ ನಾರಾಯಣ ಬಂಡಾಪುರ ಗ್ರೂಪ್ ಆಫ್ ಕಾಲೇಜಸ್ನ ಅಧ್ಯಕ್ಷರಾದ ಸಿ.ಎಂ. ಮಂಜುನಾಥ, ಖ್ಯಾತ ಚಲನಚಿತ್ರ ನಟಿ ತ್ರಿವೇಣಿ ರಾಜ್, ಜೋಯಾಲುಕ್ಕಾಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳಾದ ಅಂಟೋನಿ ಜೋಸ್ ಹಾಗೂ ಥಾಮಸ್ ಮ್ಯಾಥ್ಯೂ, ಡೈರೆಕ್ಟರ್ ಎಲ್ಸಾ ಜಾಯ್ ಅಲುಕ್ಕಾಸ್, ಹೆಡ್–ರಿಟೇಲ್ ರಾಜೇಶ್ ಕೃಷ್ಣ, ಮಾರ್ಕೆಟಿಂಗ್ ಮ್ಯಾನೇಜರ್ ಸಾಜು ಪೌಲ್, ಕರ್ನಾಟಕ ರೀಜಿಯನಲ್ ಮ್ಯಾನೇಜರ್ ಜಿನೇಶ್ ವಿ.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜೋಯಾಲುಕ್ಕಾಸ್ ಪ್ರತಿನಿಧಿಗಳು, ವಜ್ರಾಭರಣಗಳಲ್ಲಿ ಹೊಸ ವಿನ್ಯಾಸ, ಶುದ್ಧತೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಕರಕುಶಲತೆಯನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಡೈಮಂಡ್ ಜ್ಯುವೆಲ್ಲರಿ ಶೋ ಆಯೋಜಿಸಲಾಗಿದೆ ಎಂದು ಹೇಳಿದರು.
ವಿವಿಧ ವಯೋವರ್ಗ ಮತ್ತು ರುಚಿಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ವಿಶಿಷ್ಟ ವಜ್ರಾಭರಣಗಳು ಗ್ರಾಹಕರ ಗಮನ ಸೆಳೆದವು.
ಕಾರ್ಯಕ್ರಮದ ವೇಳೆ ಶೋರೂಮ್ಗೆ ಆಗಮಿಸಿದ ಗ್ರಾಹಕರು ವಜ್ರಾಭರಣಗಳ ವೈವಿಧ್ಯ, ಗುಣಮಟ್ಟ ಮತ್ತು ನವೀನ ವಿನ್ಯಾಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ನಗರ ಆಭರಣ ಪ್ರಿಯರಿಗಾಗಿ ವಿಶಿಷ್ಟ ಅನುಭವವನ್ನು ನೀಡಲಿದೆ ಎಂದು ಜೋಯಾಲುಕ್ಕಾಸ್ ಸಂಸ್ಥೆ ತಿಳಿಸಿದೆ.
