ಬೆಂಗಳೂರು: ನಗರದ ಖಾಸಗಿ ಹೊಟೇಲ್ನಲ್ಲಿ ಸ್ಫೂರ್ತಿ ಸೇವಾಶ್ರಮದ ವತಿಯಿಂದ ಆಯೋಜಿಸಲಾದ “ಕರ್ಣಾಟಕ ಐಕಾನ್ ಎಕ್ಸಲೆಂಟ್ ಅವಾರ್ಡ್ – 2025” ಪ್ರಶಸ್ತಿ ಸಮಾರಂಭದಲ್ಲಿ ಹಾಸನ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷೆಯೂ ಹಾಗೂ ಸಮಾಜ ಸೇವೆಯಲ್ಲೂ ನಿಸ್ವಾರ್ಥವಾಗಿ ತೊಡಗಿರುವ ಶ್ರೀಮತಿ ಕೆ.ಎಚ್. ತಾರಾವತಿ ಅವರನ್ನು ಹಿರಿಯ ವೈದ್ಯ ಡಾ. ಆಂಜನಪ್ಪ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾಜ ಸೇವೆಯೊಂದಿಗೆ ಕೃಷಿ ಕ್ಷೇತ್ರದಲ್ಲಿ ನೀಡಿದ ಅಪೂರ್ವ ಕೊಡುಗೆಗೆ ಗುರುತಿನ ಚಿಹ್ನೆಯಾಗಿ ನೀಡಲಾದ ಈ ಪ್ರಶಸ್ತಿ ತಾರಾವತಿಯ ಸಾಧನೆಗೆ_STATE ಮಟ್ಟದ ಮಹತ್ವದ ಮಾನ್ಯತೆಯಾಗಿದೆ.
- ಮಂಜುನಾಥ್ ಐ.ಕೆ

[…] […]