ಕೆ.ಆರ್.ಪೇಟೆ,ಫೆ.21: ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಶಾರಾದಾ ಪೂಜೆ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾರದಾ ಪೂಜೆ ಮತ್ತು ಪೋಷಕರಿಗೆ ಪಾದಪೂಜೆ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ್ದಾಗಿದೆ.
ಶಾರದಾ ಪೂಜೆಯು ಜ್ಞಾನ, ಸಂಗೀತ, ಕಲೆ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿಯನ್ನು ಪೂಜಿಸುವ ಹಬ್ಬವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕಲಾವಿದರು ಈ ದಿನದಂದು ಸರಸ್ವತಿಯನ್ನು ಪೂಜಿಸಿ, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಾರ್ಥಿಸುತ್ತಾರೆ.

ಪೋಷಕರಿಗೆ ಪಾದಪೂಜೆ ಕಾರ್ಯಕ್ರಮವು ನಮ್ಮ ಸಂಸ್ಕಾರದ ಗುಣವಾಗಿವದೆ. ಮಕ್ಕಳು ತಮ್ಮ ಪೋಷಕರಿಗೆ ಗೌರವ ಸಲ್ಲಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಒಂದು ಅವಕಾಶವಾಗಿದೆ. ಪೋಷಕರು ಮಕ್ಕಳಿಗೆ ಜೀವನದ ಮೊದಲ ಗುರುಗಳು ಮತ್ತು ಅವರ ಮಾರ್ಗದರ್ಶನವು ಮಕ್ಕಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ.
ಪಾದಪೂಜೆಯ ಮೂಲಕ, ಮಕ್ಕಳು ತಮ್ಮ ಪೋಷಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಮತ್ತು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಪಾದಪೂಜೆ ಮತ್ತು ಶಾರದಾ ಪೂಜೆ ಈ ಎರಡೂ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ್ದಾಗಿವೆ ಮತ್ತು ಮಕ್ಕಳಿಗೆ ಮೌಲ್ಯಯುತವಾದ ಪಾಠಗಳನ್ನು ಕಲಿಸುತ್ತವೆ. ಪ್ರತಿ ಶಾಲೆಗಳಲ್ಲಿಯೂ ವಾರ್ಷಿಕ ಪರೀಕ್ಷೆಯ ದಿನ ಆರಂಭಕ್ಕೆ ಮುನ್ನ ಶಾರದಾ ಪೂಜೆ ನಡೆಸುವುದು ವಾಡಿಕೆಯಾಗಿದೆ ಇದರಂತೆ ನಮ್ಮ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿಯೂ ಶಾರದಾ ಪೂಜೆ ನಡೆಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ಸಭೆಯಲ್ಲಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪಿ.ವಿ.ರಮೇಶ್, ಕಾರ್ಯದರ್ಶಿ ಶಿವಕುಮಾರ್ ,ಖಜಾಂಚಿ ಶೀಲಾ ಶಿವಕುಮಾರ್, ಮುಖ್ಯ ಶಿಕ್ಷಕಿ ರಹಿಲಾಬಾನು, ರಶ್ಮಿ,ಶಿಕ್ಷಕರಾದ ಪ್ರಕಾಶ್, ಸಂದ್ಯಾ, ಪ್ರೀತಿ, ಶ್ರೀಕಾಂತ, ಶಬಾನಬಾನು, ಜಯಶ್ರೀ.ಸಿ.ಸಿನ್, ಚೈತ್ರ, ಸಾಮ್ಯ, ಭವ್ಯ, ಜಯಶ್ರೀ ಎನ್, ರಮ್ಯಾ, ಮದೀನಾ, ಮಹಾಲಕ್ಷ್ಮಿ, ಪಿ.ಎಸ್.ಚಿರಾಗ್ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
