ಕೆ.ಆರ್.ಪೇಟೆ: ಇದೇ ತಿಂಗಳು 28 ರಂದು ನಡೆಯಲಿರುವ ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ (ಬಿ.ವರ್ಗ ಮೀಸಲು) ಕ್ಷೆತ್ರಕ್ಕೆ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಂಡಿಹೊಳೆ ಬಿ.ಆರ್ ಲತಾಮಣಿ ಕಾಯಿ ಮಂಜುನಾಥ್ ಚುನಾವಣಾ ಅಧಿಕಾರಿ ತಹಶಿಲ್ದಾರ್ ಅಶೋಕ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ ಮಂಜು, ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡ,ಶೀಳನೆರೆ ಮೋಹನ್,ಎಂ ಡಿ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ ಹರೀಶ್,ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್ ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ಸಂತೆಬಾಚಹಳ್ಳಿ ರವಿ ಕುಮಾರ್,ಅಭ್ಯರ್ಥಿಗಳಾದ ಬಿ.ಸಿ ಮಧು,ಜ್ಯೋತಿ ದೇವರಾಜು,ಸೇರಿದಂತೆ ಜೆಡಿಎಸ್ ಮುಖಂಡರು ಇದ್ದರು.
