ಕೆ.ಆರ್.ಪೇಟೆ: ತಾಲ್ಲೂಕು ಸವಿತಾ ಸಮಾಜ ಮಂಗಳವಾದ್ಯ ಕಲಾವಿದರಿಂದ ಸಂಗೀತ ಪಿತಾಮಹ ಶ್ರೀ ತ್ಯಾಗರಾಜರು,ದಾಸಶ್ರೇಷ್ಠ ಪುರಂದರದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವವನ್ನು ಕೆ.ಆರ್.ಪೇಟೆ ಪಟ್ಟಣದ ಹೊರ ಹೊಲಯದಲ್ಲಿರುವ ಶ್ರೀ ಚಾಮುಂಡೇಶ್ವರಿ ಸಮುದಾಯ ಭವನದಲ್ಲಿ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು.
ಆರಾಧನಾ ಮಹೋತ್ಸವ ಪ್ರಯುಕ್ತ ಕೆ.ಆರ್.ಪೇಟೆ ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮುಂಜಾನೆಯಿಂದ ಅಭಿಷೇಕ ವಿಶೇಷ ಪೂಜೆ ಕೈಗೊಂಡು ದೇವಾಲಯದ ಸುತ್ತ ನಾದಬ್ರಹ್ಮ ತ್ಯಾಗರಾಜರು ಭಾವಚಿತ್ರವನ್ನು ಸುಮಧುರ ಮಂಗಳ ವಾದ್ಯ ಕಲಾವಿದರ ತಂಡಗಳ ಮೂಲಕ ಪ್ರದಕ್ಷಿಣೆ ಹಾಕಿ ಶ್ರೀ ಚಾಮುಂಡೇಶ್ವರಿ ಭವನಕ್ಕೆ ಕರೆತರಲಾಯಿತು.
ಬಳಿಕ ಮಾತನಾಡಿದ ಸವಿತ ಸಮಾಜ ಮಂಗಳವಾದ್ಯ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ಅಕ್ಕಿಹೆಬ್ಬಾಳು ಲೋಕೇಶ್ ಮಾತನಾಡಿ ನಮ್ಮ ಸಂಘದ ವತಿಯಿಂದ ಇಂದಿನಿಂದಲೂ ಕೂಡ ಪ್ರತಿ ವರ್ಷದಂತೆ ಸದ್ಗುರು ತ್ಯಾಗರಾಜ ಆರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದೇವೆ ಈ ವರ್ಷವೂ ಶ್ರದ್ದ ಭಕ್ತಿಯಿಂದ ಆರಾಧಿಸಿದ್ದೇವೆ.ತ್ಯಾಗರಾಜರ ಜೀವನದಲ್ಲಿ ಸಾಧನೆ, ತಪಸ್ಸು, ಭಕ್ತಿ ಇತ್ತು. ಅದಕ್ಕಾಗಿ ಅವರು ರಚಿಸಿದ ಕೀರ್ತನೆಗಳು ಸಾರ್ವಕಾಲಿಕವಾಗಿವೆ ಎಂದರು.

ಬಳಿಕ ಭವನದಲ್ಲಿ ನಡೆದ ಸಂಗೀತ ವೈವಿದ್ಯದಲ್ಲಿ ಸ್ಥಳೀಯ ನುರಿತ ಯುವ ಕಲಾವಿದರು ತ್ಯಾಗರಾಜ ಮತ್ತು ಪುರಂದರದಾಸರು ರಚಿಸಿರುವ ನಾನಾ ಬಗೆ ಕೀರ್ತನೆಗಳನ್ನು ಸಂಗೀತದಲ್ಲಿ ಆರಾಧಿಸುವ ಮೂಲಕ ಭಕ್ತಿ ನಮನ ಮೆರೆದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ ಮಂಜು,ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿ ಗಂಜಿಗೆರೆ ಮಹೇಶ್,ಸವಿತ ಸಮಾಜ ತಾಲ್ಲೂಕು ಅಧ್ಯಕ್ಷ ಸಂತೆಬಾಚಹಳ್ಳಿ ಮಂಜುನಾಥ್,ಸಂಘದ ಅಧ್ಯಕ್ಷ ಅಕ್ಕಿಹೆಬ್ಬಾಳು ಲೋಕೇಶ್,ಗೌರವ ಅಧ್ಯಕ್ಷ ಮೊದೂರು ಶೇಖರ್,ಉಪಾಧ್ಯಕ್ಷ ಕೆ.ಆರ್.ಪೇಟೆ ರೇವಣ್ಣ,ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಬಲ್ಲೆನಹಳ್ಳಿ ಸತ್ಯಮೂರ್ತಿ,ಸಹ ಕಾರ್ಯದರ್ಶಿ ಬಿಲ್ಲೇನಹಳ್ಳಿ ಕುಮಾರ್,ಖಜಾಂಚಿ ಪುರ ನಂದೀಶ್, ಪದಾಧಿಕಾರಿಗಳಾದ ಸಿಂದಘಟ್ಟ ಪುಟ್ಟರಾಜು,ಹೊಸಹೊಳಲು ಲೋಕೇಶ್, ವಸಂತ ಕುಮಾರ್, ಬಳ್ಳೆಕೆರೆ ಮಹೇಶ್,ಹೊಸಹೊಳಲು ಮಂಜು,ಕುಮಾರ್,ಕಿರಣ್,ಲೋಕೇಶ್,ಕಲಾವಿದರುಗಳಾದ ಸಾರಂಗಿ ಸತೀಶ್,ಹೊಸಹೊಳಲು ಪುನೀತ್, ಮಂಜು, ಕಿರಣ್,ಅಕ್ಕಿಹೆಬ್ಬಾಳು ಚೇತನ್,ಮಹೇಶ್, ಹೊಸಕೋಟೆ ಮಂಜು ಮಾಚಗೋನಹಳ್ಳಿ ದೀಪು,ಶೇಖರ್,ದಿನೇಶ್,ಬಿಲ್ಲೇನಹಳ್ಳಿ ಸ್ವಾಮಿ,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
