ಕೆ.ಆರ್.ಪೇಟೆ: ತಾಲ್ಲೂಕು ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಕೆ ದೇವರಾಜು ಆಲಂಬಾಡಿ ಕಾವಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷ ಆರ್.ಕೆ ರಮೇಶ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಶಿಕ್ಷಕ ಎ.ಕೆ ದೇವರಾಜು ಆಲಂಬಾಡಿ ಕಾವಲು ಹೊರತುಪಡಿಸಿ ಉಳಿದ ನಿರ್ದೇಶಕರಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಎ.ಕೆ ದೇವರಾಜು ಅಲಂಬಾಡಿ ಕಾವಲು ಅವಿರೋಧವಾಗಿ ಆಯ್ಕೆಯಾದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ* ನಮ್ಮ ಕೆ.ಆರ್.ಪೇಟೆ ತಾಲ್ಲೂಕು ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಇಂದಿನಿಂದಲೂ ಸಾಮಾಜಿಕ ನ್ಯಾಯದಡಿ ಜಾತ್ಯತೀತವಾಗಿ ಸರ್ವರಿಗೂ ಕ್ರಿಯಾತ್ಮಕ ಸಂಘದ ಅಭಿವೃದ್ಧಿಗೆ ಶ್ರಮಿಸುವ ಮನಸುಳ್ಳ ವ್ಯಕ್ತಿಗಳಿಗೆ ಅಧಿಕಾರ ನೀಡುವ ಉದ್ದೇಶದಿಂದ ಒಳಂಬಡಿಕೆಯಂತೆ ಇಂದು ನಡೆದ ಚುನಾವಣೆಯಲ್ಲಿ ಶಿಕ್ಷಕ ಎ.ಕೆ ದೇವರಾಜು ಆಲಂಬಡಿ ಕಾವಲು ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 250 ಗಳಿಂದ ಆರಂಭಗೊಂಡ ಸಂಘ ಇಂದು ಎರಡು ಕೋಟಿ ವ್ಯವಹಾರದ ಮೂಲಕ ಸಕ್ರಿಯ ಸಹಕಾರ ಕೇಂದ್ರವಾಗಿದೆ ಹಾಗಾಗಿ ನೂತನ ಅಧ್ಯಕ್ಷರು ಅವರ ಆಡಳಿತ ಅವಧಿಯಲ್ಲಿ ಸರ್ವ ನಿರ್ದೇಶಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನಲ್ಲಿ ಮಾದರಿ ಸಹಕಾರ ಸಂಘ ಎಂಬ ಹೆಸರಿಗೆ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎ.ಕೆ ದೇವರಾಜು ಆಲಂಬಾಡಿ ಕಾವಲು* ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಮಾಜಿ ಅಧ್ಯಕ್ಷ ಪದ್ಮೇಶ,ರಾಜ್ಯ ಉಪಾಧ್ಯಕ್ಷ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಟಿ ಲಕ್ಷ್ಮಣ್ ಗೌಡ, ಇವರ ಮಾರ್ಗದರ್ಶನ ಹಾಗೂ ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ನಮ್ಮ ತಾಲೂಕು ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಂಘದ ಘನಸ್ಥಾನವನ್ನು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಲಂಕರಿಸಿದ್ದೇನೆ ಅದಕ್ಕೆ ಋಣಿಯಾಗಿ ನನ್ನ ಆಡಳಿತ ಅವಧಿಯಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಕಾಯ ವಾಚ ಮನಸ್ಸು ಪ್ರಾಮಾಣಿಕವಾಗಿ ಶ್ರಮವಹಿಸಿ ಸಾಕ್ಷಿ ಆಗುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಹಿತೈಷಿ ಬಳಗ ನೂತನ ಅಧ್ಯಕ್ಷ ಎ.ಕೆ ದೇವರಾಜು ಆಲಂಬಾಡಿ ಕಾವಲು ಸನ್ಮಾನಿಸಿ ಸಿಹಿ ತಿನಿಸುವ ಮೂಲಕ ಗೆಲುವು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಪ್ರಧಾನ ಕಾರ್ಯದರ್ಶಿ ಸಿ.ಟಿ ಲಕ್ಷ್ಮಣಗೌಡ,ಸಂಘದ ನಿಕಟಪೂರ್ವ ಅಧ್ಯಕ್ಷ ಆರ್.ಕೆ ರಮೇಶ್, ಗೌರವಾಧ್ಯಕ್ಷ ನಾಗಕುಮಾರ್,ಉಪಾಧ್ಯಕ್ಷ ಕೋದಂಡರಾಮ,
ನಿರ್ದೇಶಕರಾದ ಎ.ಹೆಚ್ ಯೋಗೇಶ್,ಮಂಜೇಗೌಡ, ಎಸ್. ಎಂ ಶಿವಕುಮಾರ್, ವನಜಾಕ್ಷಿ , ರೇವಮ್ಮ,ಸುಬ್ರಮಣ್ಯ, ದೊರೆಸ್ವಾಮಿ, ಎಸ್.ಎಸ್ ಶಿವಕುಮಾರ್,ಹೆಚ್ ಆರ್ ಯೋಗೇಶ್,ಎನ್.ಪಿ.ಎಸ್ ಶಿಕ್ಷಕ ಸಂಘ ಕೆ.ಎಸ್ ಮಂಜುನಾಥ್,ಸಂಘದ ಕಾರ್ಯದರ್ಶಿ ಜಯರಾಮ್,ಸಹಾಯಕಿ ಮಾನಸ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
