ಕೆ.ಆರ್.ಪೇಟೆ,ಫೆ.25: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ 15ನೇ ಹಣಕಾಸು ಯೋಜನೆಯ ಅನುಧಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಶುದ್ದ ಕುಡಿಯುವ ನೀರಿನ ಪಿಲ್ಟರ್ ಪರಿಕರಗಳನ್ನು ವಿತರಣೆ ಮಾಡಿದರು.

ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್ಲದಹಳ್ಳಿ, ವಳಗೆರೆಮೆಣಸ, ಅನುವಿನಕಟ್ಟೆ, ಕೆರೆಕೋಡಿ, ಬಂಡಬೋವಿನಹಳ್ಳಿ, ಗುಡ್ಡೇನಹಳ್ಳಿ, ಬಿ.ಕಲ್ಲಹಳ್ಳಿ, ಅರೆಬೊಪ್ಪನಹಳ್ಳಿ, ಚಿಕ್ಕೋಸಹಳ್ಳಿ, ಬೊಮ್ಮನಾಯಕನಹಳ್ಳಿ, ಹರೀನಹಳ್ಳಿ, ನಗರೂರು, ಅಗ್ರಹಾರಬಾಚಹಳ್ಳಿ ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು, ಸರ್ಕಾರಿ ಪ್ರೌಢಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಅನುಧಾನದಲ್ಲಿ ವಾಟರ್ ಫಿಲ್ಟರ್ಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎ.ಸಿ.ದಿವಿಕುಮಾರ್ ಅವರು ವಿತರಣೆ ಮಾಡಿ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯಕ್ಕೆ ಶುದ್ದ ಕುಡಿಯುವ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ 5ವರ್ಷಗಳ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ವಾಟರ್ ಪಿಲ್ಟರ್ಗಳನ್ನು ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ನಮ್ಮ ಮಕ್ಕಳಿಗೆ ಶುದ್ದ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಸಿ.ದಿವಿಕುಮಾರ್ ಶಾಲಾ ಮತ್ತು ಅಂಗನವಾಡಿ ಶಿಕ್ಷಕರಲ್ಲಿ ಮನವಿ ಮಾಡಿದರು. ನಮ್ಮ ಗ್ರಾಮ ಪಂಚಾಯಿತಿ ಅವಧಿ ಮುಗಿದಿರಬಹುದು ವಯಕ್ತಿಯ ಅನುಧಾನದಲ್ಲಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಸದಾ ನನ್ನ ಸೇವೆ ಮುಂದುವರೆಯಲಿದೆ ಎಂದು ಅಧ್ಯಕ್ಷರಾದ ಎ.ಸಿ.ದಿವಿಕುಮಾರ್ ಭರವಸೆ ನೀಡಿದರು. ನನಗೆ ಎರಡೂವರೆ ವರ್ಷಗಳ ಕಾಲ ಉತ್ತಮ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಲು ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರಿಗೆ, ಸಾರ್ವಜನಿಕರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅಧ್ಯಕ್ಷ ಎ.ಸಿ.ದಿವಿಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ಪಿಡಿಓ ಶಿಲ್ಪಪ್ರದೀಪ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಿಲ್ಲದಹಳ್ಳಿ ಶ್ರೀನಿವಾಸ್, ಚಿಕ್ಕೋಸಹಳ್ಳಿ ಕುಮಾರಗೌಡ, ನಗರೂರು ನಂಜೇಗೌಡ, ಅನುವಿನಕಟ್ಟೆ ಆಶಾಆನಂದ್, ವಳಗೆರೆಮೆಣಸ ನೇತ್ರಾವತಿ.ಸಿ.ಆರ್.ಪಿ.ಕುಮಾರ್, ಶಶಿರೇಖಾಅಶೋಕ್, ರಮಾನಂದ್, ಜಯಂತಿರವೀಂದ್ರ, ಅಗ್ರಹಾರಬಾಚಹಳ್ಳಿ ರಮೇಶ್.ಆರ್, ಚನ್ನೇಗೌಡ, ನೇತ್ರಾವತಿರಮೇಶ್, ರೇಣುಕಾಈಶ್ವರ್, ಸಾವಿತ್ರಮ್ಮಗೋವಿಂದಶೆಟ್ಟಿ, ಪ್ರೇಮಾಚಂದ್ರಶೇಖರ್, ಗುಡ್ಡೇನಹಳ್ಳಿ ಕುಮಾರ್, ಭಾಗ್ಯ ನಂಜುಂಡಯ್ಯ, ಕೆರೆಕೋಡಿ ಫಯಾಜ್ಉಲ್ಲಾಖಾನ್, ಅರೆಬೊಪ್ಪನಹಳ್ಳಿ ದಿನೇಶ್, ರೇವತಿಹರೀಶ್, ಗ್ರಾ.ಪಂ.ಕಾರ್ಯದರ್ಶಿ ಚಂದ್ರಕುಮಾರ್, ಎಫ್.ಡಿ.ಸಿ ಗೀತಾ, ಡಿಇಓ ತ್ರಿವೇಣಿ, ಬಿಲ್ ಕಲೆಕ್ಟರ್ ನರಸಿಂಹಯ್ಯ, ಗ್ರಂಥಪಾಲಕಿ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:25.ಕೆ.ಆರ್.ಪಿ-04: ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ 15ನೇ ಹಣಕಾಸು ಯೋಜನೆಯ ಅನುಧಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಶುದ್ದ ಕುಡಿಯುವ ನೀರಿನ ಪಿಲ್ಟರ್ ಪರಿಕರಗಳನ್ನು ವಿತರಣೆ ಮಾಡಿದರು.
– ಶ್ರೀನಿವಾಸ್ ಆರ್.
