ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ ಹೋಬಳಿ ಮುದುಗೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಮೃತ ರಘು,ಉಪಾಧ್ಯಕ್ಷರಾಗಿ ದಿವ್ಯ ಚನ್ನೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಮಂಗಳಮ್ಮ ಕರೀಗೌಡ, ಉಪಾಧ್ಯಕ್ಷರಾದ ವಸಂತ ಪ್ರದೀಪ್ ಅವರ ರಾಜೀನಾಮೆಯಿಂದ ತೆರವಾಗಿದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಅಮೃತ ರಘು ಎಂ.ಬಿ ಉಪಾಧ್ಯಕ್ಷರ ಸ್ಥಾನ್ಕೆ ದಿವ್ಯ ಚನ್ನೆಗೌಡ ಬಿಟ್ಟರೆ ಉಳಿದವರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಆದಿಲ್ ಪಾಷ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಮದುಗೆರೆ ಪರಮೇಶ್* ಸಂಘದ ನಿರ್ಗಮಿತ ಅಧ್ಯಕ್ಷರು ಉಪಾಧ್ಯಕ್ಷರು ಅವರ ಆಡಳಿತ ಅವಧಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಸಂಘದ ಆರ್ಥಿಕತೆಗೆ ಶ್ರಮವಹಿಸಿದ್ದಾರೆ.ಸಂಘದ ನಿರ್ದೇಶಕರು ಗ್ರಾಮಸ್ಥರು ಪಕ್ಷಾತೀತ ಸಹಕಾರದಿಂದ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ .ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಸಂಘದ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ ಪ್ರಕಟವಾಗುತ್ತಿದ್ದಂತೆ ಬೆಂಬಲಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷೆ ದಿವ್ಯ ಚನ್ನೇಗೌಡ, ನಿರ್ದೇಶಕರಾದ ಮಂಗಳಮ್ಮ ಕರೀಗೌಡ,ವಸಂತ ಪ್ರದೀಪ್,ಸೌಭಾಗ್ಯ ಕಲಾವತಿ,ಲತಾ, ಸುಂದ್ರಮ್ಮ, ಕೃಷ್ಣ ಕುಮಾರಿ, ಮಂಜುಳಾ,ಸುಜಾತ,ವನಜಾಕ್ಷಿ ಸಂತೋಷ್,ಗಂಜಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಂಕರನಾಗ್, ಯಜಮಾನ್ ಕರೀಗೌಡ, ಗೌಡೇಗೌಡ,ಎಂ ಬಿ ಲೋಕೇಶ್, ಪಟೇಲ್ ಹರೀಶ್, ಯೊಗೇಂದ್ರ ಎಂ.ಕೆ, ಸಂಣ್ಣೆಗೌಡ, ಎಂ.ಎಸ್ ಸಂತೋಷ್, ಎಂ ಸಿ ಕುಮಾರ್,ಸೇರಿದಂತೆ ಉಪಸ್ಥಿತರಿದ್ದರು
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
