ಕೆ.ಆರ್.ಪೇಟೆ: ಎಂ.ಆರ್.ಪಿ.ದರದಲ್ಲಿ ಮಧ್ಯ ಕೊಡದಿದ್ದಕ್ಕೆ ಕುಪಿತಗೊಂಡ ಪುಂಡರ ಗುಂಪು ಮಧ್ಯ ಮಾರಾಟದ ಬಾರ್ ಗೆ ಬೆಂಕಿಯಿಟ್ಟು ಬಾರ್ ನಲ್ಲಿ ದಾಂದಲೆ ನಡೆಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ತೋಟಗಾರಿಕೆ ಫಾರಂ ಬಳಿ ಇರುವ ಈಗಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಪುಂಡರ ಗುಂಪು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಗಸರಹಳ್ಳಿ ಪರಮೇಶ್ ಎಂಬುವವರಿಗೆ ಸೇರಿದ ಈಗಲ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಮಧ್ಯ ಸೇವನೆಗೆ ಹೋಗಿರುವ ಮುರುಕನಹಳ್ಳಿ ಗ್ರಾಮದ ರಕ್ಷಿತ್ ಹಾಗೂ ಆತನ ಸ್ನೇಹಿತರಿಬ್ಬರು ಎಂ.ಆರ್.ಪಿ ಬೆಲೆಗೆ ಹಾಗು ಖಚಿತವಾಗಿ ಮದ್ಯದ ಬಾಟಲ್ ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಪುಂಡರ ಬೇಡಿಕೆಗೆ ಬಾರ್ ಮಾಲೀಕರು ನಿರಾಕರಿಸಿ, ಮದ್ಯ ಕೊಡದಿದ್ದಕ್ಕೆ ಬಾರ್ ಗೆ ಮತ್ತು ಮಾಲೀಕನಿಗೆ ಸೇರಿದ ಕಾರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಾಂಧಲೆ ಮಾಡಿ
ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ನಂತರ ಆರೋಪಿಗಳು ನಾಪತ್ತೆಯಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ತಾಲ್ಲೂಕಿನ ಯಾವುದೇ ಬಾರ್ ಗಳಲ್ಲಿಯೂ ಎಂ.ಆರ್.ಪಿ. ದರಕ್ಕೆ ಮಧ್ಯವನ್ನು ಮಾರಾಟ ಮಾಡುತ್ತಿಲ್ಲ. ಪ್ರತಿ ಕ್ವಾಟರ್ ಗೆ ಕನಿಷ್ಠ 15ರಿಂದ 20ರೂಗಳನ್ನು ಹೆಚ್ಚಾಗಿ ಪಡೆಯುತ್ತಾರೆ. ಇದರಿಂದಾಗಿ ಬಾರ್ ಗಳಲ್ಲಿ ಗ್ರಾಹಕರು ಮತ್ತು ಬಾರ್ ಮಾಲೀಕರ ನಡುವೆ ದಿನನಿತ್ಯ ಗಲಾಟೆಗಳು ನಡೆಯುತ್ತಿವೆ. ಹಾಗಾಗಿ ಬಾರ್ ಮಾಲೀಕರು ಮೊದಲು ತಾವು ಎಂ.ಆರ್.ಪಿ. ದರದಲ್ಲಿ ಮಾತ್ರ ಮದ್ಯ ಮಾರಾಟ ಮಾಡುವ ಮೂಲಕ ಇಂತಹ ಅವಗಡಗಳು ನಡೆಯದಂತೆ ನೋಡಿಕೊಳ್ಳಬೇಕು.
ಇಲ್ಲದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ತಮ್ಮ ಹೆಚ್ಚು ಬೆಲೆಗೆ ಮದ್ಯ ಮಾರುವ ಭ್ರಷ್ಟ ವ್ಯವಸ್ಥೆಯಿಂದ ಗಲಾಟೆಗಳು ನಡೆದು ಲಾ & ಆರ್ಡರ್ ಸಮಸ್ಯೆ ಎದುರಾದರೆ ಬಾರ್ ಮಾಲೀಕರೆ ಹೊಣೆಗಾರರಾಗಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು ಪತ್ರಕರ್ತರೊಂದಿಗೆ ಮಾತನಾಡಿ ಎಚ್ಚರಿಸಿದ್ದಾರೆ.
– ಶ್ರೀನಿವಾಸ್ ಆರ್.
