ಕೆ.ಆರ್.ಪೇಟೆ,ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲೇನಹಳ್ಳಿ ಗ್ರಾಮದ ಅಲೇನಹಳ್ಳಿ ಬಾಯ್ಸ್ ವತಿಯಿಂದ ದಸರಾ ಹಬ್ಬ ಹಾಗೂ ಆಯುಧ ಪೂಜಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬನ್ನಿ ಮರಕ್ಕೆ ಪೂಜೆ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿ-ಪರoಪರೆಯ ಪ್ರತೀಕವಾಗಿದೆ. ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆಲೇನಹಳ್ಳಿ ಗ್ರಾಮಸ್ಥರು ಕಳೆದ ವಿಧಾನಸಭೆಯಲ್ಲಿ ನನಗೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಮ್ಮ ನಾಯಕರಾದ ಕುಮಾರಣ್ಣ ಅವರಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ ಇದಕ್ಕೆ ಆಭಾರಿಯಾಗಿರುತ್ತೇವೆ.

ಕೇಂದ್ರ ಸಚಿವರಾದ ಕುಮಾರಣ್ಣ ಮತ್ತು ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶಕ್ತಿ ಮೀತಿ ಅನುಧಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ನೀವು ನಮ್ಮ ಮೇಲೆ ಮತ್ತು ಪಕ್ಷದ ಮೇಲೆ ಇಟ್ಟಿರುವ ಪ್ರೀತಿ ಸದಾ ನಮ್ಮ ಮೇಲೆ ಇರಲಿ, ಮುಂಬರುವ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಹರಸಬೇಕು. ಆಲೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಶಾಸಕರಾದ ಹೆಚ್.ಟಿ.ಮಂಜು ಭರವಸೆ ನೀಡಿದರು.

ಇದೇ ಸಮಯದಲ್ಲಿ ಯುವಕರು ಗ್ರಾಮಕ್ಕೆ ಶಾಸಕರಾದ ಹೆಚ್.ಟಿ.ಮಂಜು, ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಜೆಸಿಬಿ ಮೂಲಕ ಹೂಮಳೆ ಸುರಿಸಿ, ಅದ್ದೂರಿ ಸ್ವಾಗತಿಸಿದರು. ಶಾಸಕ ಹೆಚ್.ಟಿ.ಮಂಜು, ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ ಮತ್ತು ಇತರೆ ಗಣ್ಯರಿಗೆ ಗ್ರಾಮಸ್ಥರು ಸಸಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ತಾಲ್ಲೂಕು ಟಿಎಪಿಸಿಎಂಎಸ್ ನೂತ ನಿರ್ದೇಶಕ ಬಿ.ಎಂ.ಕಿರಣ್, ಜೆಡಿಎಸ್ ಮುಖಂಡರು ಹಾಗೂ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಹೋರಾಟ ವೇದಿಕೆಯ ಅಧ್ಯಕ್ಷ ಗದ್ದೆಹೊಸೂರು ಜಗದೀಶ್, ಗ್ರಾ.ಪಂ.ಸದಸ್ಯರಾದ ಮೂಡನಹಳ್ಳಿ ಅನುಕುಮಾರ್, ಹೈಕೋರ್ಟ್ ಅಧಿಕಾರಿ ದೊರೆಸ್ವಾಮಿ, ಮೈಸೂರು ಎಲೆಕ್ಟಿçಕಲ್ಸ್ ಕುಮಾರ್, ಮುಖಂಡರಾದ ನಿಂಗೇಗೌಡ, ಲೋಕೇಶ್, ಶೇಖರ್, ಫಾರಂ ಹೌಸ್ ಕುಮಾರ್, ಗ್ರಾಮದ ಯುವ ಮುಖಂಡರಾದ ಲೋಕೇಶ್, ಅಲೇನಹಳ್ಳಿ ಬಾಯ್ಸ್ ಯುವಕರ ತಂಡ ಮುಖಂಡರಾದ ಸಚಿನ್, ಸೃಜನ್, ಸುಜಿತ್, ಚಂದನ್, ಧನಂಜಯ್, ಕೃಷ್ಣ, ಶರತ್, ಶಾಸಕರ ಆಪ್ತ ಸಹಾಯಕ ಪ್ರತಾಪ್, ಆರ್.ಟಿ.ಓ ಮಲ್ಲಿಕಾರ್ಜುನ್ ರವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್ ಸೇರಿದಂತೆ ನೂರಾರು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ, ಎಸ್ ರವಿ ಹೊನ್ನೇನಹಳ್ಳಿ
