ಕೆ.ಆರ್.ಪೇಟೆ,ಸೆ.28: ಕುರಿಗಳ ಹಿಂಡಿನ ಮೇಲೆ ಬೊಲೆರೋ ಕಾರೊಂದು ಅಡ್ಡಾದಿಡ್ಡಿ ಹರಿದ ಪರಿಣಾಮ 10ಕುರಿಗಳು ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ- ಕೆ.ಆರ್.ಪೇಟೆ ಮುಖ್ಯರಸ್ತೆಯ ಕುಂದನಹಳ್ಳಿ ಗೇಟ್ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಕುರಿಗಾಹಿ ಈರಣ್ಣ ಎಂಬುವವರಿಗೆ ಸೇರಿದ ಕುರುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಕಾರು ಚಾಲಕನ ಅಜಾಗರೂತೆಯಿಂದ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ 10 ಕುರಿಗಳು ಸ್ಥಳದಲ್ಲೇ ಸಾವು, 20ಕ್ಕೂ ಕುರಿಗಳಿಗೆ ಗಂಭೀರವಾದ ಗಾಯಗಳಾಗಿದೆ.
ಶನಿವಾರ ರಾತ್ರಿ 7.30.ಗಂಟೆ ಸಮಯದಲ್ಲಿ ಕುಂದನಹಳ್ಳಿ ಗೇಟ್ ಬಳಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಕೆ.ಎ.51, ಎಂ.ಜಿ.9689 ನಂಬರಿನ ಬೊಲೆರೋ ಕಾರಿನ ಚಾಲಕ ಮಧ್ಯ ಪಾನ ಮಾಡಿ ಅಡ್ಡಾದಿಡ್ಡಿಯಾಗಿ ಬೊಲೆರೋ ವಾಹನವನ್ನು ಚಲಾಯಿಸಿದ ಕಾರಣ 10ಕುರಿಗಳು ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿವೆ. 20ಕ್ಕೂ ಹೆಚ್ಚು ಕುರಿಗಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಕುರಿಗಾಯಿ ಈರಣ್ಣ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ನಾನು ಮತ್ತು ನನ್ನ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದೇವೆ.

ಘಟನೆಯಿಂದ ಕುರಿಗಾಯಿ ಈರಣ್ಣ ಅವರಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಧಾರುಣವಾಗಿ ಸಾವನ್ನಪ್ಪಿದ ಕುರಿಗಳ ಮುಂದೆ ಮಾಲೀಕ ಈರಣ್ಣ ಆಕ್ರಂಧನ ಮುಗಿಲುಮುಟ್ಟಿತ್ತು.
ಕುರಿಗಳನ್ನು ಹಿಂಡಿನ ಮೇಲೆ ವಾಹನ ಹರಿದಿರುವ ಘಟನೆಯ ಬಗ್ಗೆ ಪಶುವೈದ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಬಾರದ ಪಶುವೈದ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕುರಿ ಹಿಂಡಿನ ಮಾಲೀಕರು ಹಾಗೂ ಕುಂದನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುರಿಗಾಯಿ ಈರಣ್ಣ ನೀಡಿದ ದೂರಿನ ಮೇರೆಗೆ ಬೊಲೆರೋ ವಾಹನದ ಮಾಲೀಕನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
– ಶ್ರೀನಿವಾಸ ಎಸ್.
