ಕೆ.ಆರ್.ಪೇಟೆ : ತಾಲ್ಲೂಕಿನ ಶೀಳನೆರೆ ಹೋಬಳಿಯ ಮರಡಹಳ್ಳಿ ಗ್ರಾಮದ ರೈತ ಕುಟುಂಬದ ಯುವ ರೈತ ಅವಿನಾಶ್ ಅವರ 30ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಹಿತೈಷಿ ಹಾಗೂ ಸ್ನೇಹ ಬಳಗದ ಸಮ್ಮುಖದಲ್ಲಿ ಅಭಿಷೇಕ್ ದಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಕೆ.ಆರ್.ಪೇಟೆ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಮುಖಂಡ ಸ್ವಾಮಿಗೌಡ ಮಾತನಾಡಿ ಸ್ನೇಹಜೀವಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುಗೆ ನೀಡಬೇಕೆಂಬ ಮಹಾದಾಸೆರುವ ನಮ್ಮ ಆತ್ಮೀಯರಾದ ಮರಡಹಳ್ಳಿ ಅವಿನಾಶ್ ಅವರ ಹುಟ್ಟುಹಬ್ಬ ದಿನದಂದು ತಾನು ಬಡ ಕುಟುಂಬದ ಒಬ್ಬ ಸಣ್ಣ ಯುವ ರೈತನಾದರೂ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೊಂದವರಿಗೆ ದಿನದಲಿತರಿಗೆ ಅಳಿಲು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ, ಕೆ.ಆರ್.ಪೇಟೆ ಸರ್ಕಾರಿ ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿಸ್ತರಿಸಿ,ಹುಟ್ಟು ಹಬ್ಬದ ನೆಪದಲ್ಲಿ ಮೋಜು ಮಸ್ತಿ ಮಾಡುವ ಯುವ ಯುವಕರಿಗೆ ಮಾದರಿಯಾಗಿದ್ದಾರೆ ಇಂಥ ಚಿಕ್ಕವಯಸ್ಸಿನಲ್ಲೇ ಇಂಥ ಉದಾರು ಮನಸಿರುವ ಯುವ ರೈತ ಅಭಿಷೇಕ್ ರವರಿಗೆ ಮುಂದಿನ ದಿನಗಳಲ್ಲಿ ಭಗವಂತ ಆಯಸ್ಸು ಐಶ್ವರ್ಯ ಕರುಣಿಸಿ ಉತ್ತಮ ಭವಿಷ್ಯ ರೂಪಿಸಲಿ ಎಂದು ತಿಳಿಸಿದರು.
ಬಳಿಕ ಅವಿನಾಶ್ ಸ್ನೇಹ ಬಳಗ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿ ಕೇಕ್ ಕತ್ತರಿಸಿ ಮೂಲಕ ತಮ್ಮ ನೆಚ್ಚಿನ ಸ್ನೇಹಿತ ಅವಿನಾಶ್ ಅವರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಡಾ.ಗಿರೀಶ್, ಪರಮೇಶ್,ಯೋಗೇಶ್,ಅಶೋಕ್,ಸ್ವಾಮೀಗೌಡ, ಕುಮಾರಸ್ವಾಮಿ ಸಿ.ಎಂ, ನಾಗೇಶ್, ಹರೀಶ್, ನವೀನ್ ಸಿ.ಆರ್, ಶಾಫಿರ್ ಖಾನ್,ಚಂದು, ಶರತ್, ಕುಮಾರ್, ಹರೀಶ್,ದಿನೇಶ್,ಉಮೇಶ್, ಪ್ರಮೋದ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
