ಕೆ.ಆರ್.ಪೇಟೆ: ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡನಹಳ್ಳಿ,ಗ್ರಾಮ ಪಂಚಾಯಿತಿ ಒಳಗೊಂಡ ಕೇಂದ್ರ ಸ್ಥಾನ. ತನ್ನ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮಾದರಿಯಾಗಬೇಕಿದ್ದ ಚೌಡೇನಹಳ್ಳಿ ಗ್ರಾಮ. ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಇರುವ ಚರಂಡಿ ಸ್ವಚ್ಛಗೊಳಿಸದೆ ದಬ್ಬೆದ್ದು ನಾರುವ ಚರಂಡಿಯ ಕೊಳಚೆ ನೀರು ಜೊತೆಗೆ ಮಳೆ ನೀರು ಮಿಶ್ರಗೊಂಡು ಅದ್ವಾನ ವ್ಯವಸ್ಥೆಗೆ ತಲುಪಿರುವ ರಸ್ತೆಯ ಮೇಲೆ ಮಿನಿ ಕಾಲುವೆಯ ರೀತಿ ತಗ್ಗು ಪ್ರದೇಶದ ಮನೆಗಳಿಗೆ ಹರಿದು ಗ್ರಾಮದ ಮುಗ್ದ ಜನರ ಜೀವನದ ಜೊತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬೇಜವಾಬ್ದಾರಿ ಅಧಿಕಾರಿಗಳು ಕಾರ್ಯವೈಕರಿಗೆ ಕೈಗನ್ನಡಿಯಾಗಿದೆ ಎಂದು ಗ್ರಾಮದ ಪ್ರಜ್ಞಾವಂತರು ಕಿಡಿಕಾರಿದ್ದಾರೆ.

ಗ್ರಾಮದಲ್ಲಿರುವ ಚರಂಡಿಯನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನಲೆ ನೀರು ಚರಂಡಿಯಲ್ಲಿ ಹೋಗದೇ ಅದರೊಳಗಿನ ಮಲ, ಮೂತ್ರದ ಗಲಿಜಿನೊಂದಿಗೆ ರಸ್ತೆಯಲ್ಲಿ ಹರಿಯುತ್ತಿದೆ ಎಂದು ಆರೋಪಿಸಿ, ದಿನನಿತ್ಯ ಕನಿಷ್ಠ 7 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸ್ಥಳದ ಎದುರೇ ಇರುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗದ ಬೇಜವಾಬ್ದಾರಿ ಅಧಿಕಾರಿಯಿಂದ ಗ್ರಾಮದ ಜನರ ಅಭಿವೃದ್ಧಿ ಚಿಂತಿಸಲು ಸಾಧ್ಯವಾ ಎಂದು ಪ್ರಜ್ಞಾವಂತರು ಪ್ರಶ್ನಿಸಿ…? ಸಂಬಂಧಪಟ್ಟ ಪಿಡಿಒ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
