ಕೆ.ಆರ್.ಪೇಟೆ :ಪಟ್ಟಣದ ಚೆಸ್ಕಾಂ ಇಲಾಖೆಯಲ್ಲಿ ಕಿರಿಯ ಲೆಕ್ಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಣ್ಣ (52) ಅವರು ಹೊಸಹೊಳಲು ಸಮೀಪದ ಜಲಸೂರು–ಬೆಂಗಳೂರು ಕೆಶಿಫ್ ಹೈವೇ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವಣ್ಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮಾಲಿನಿ, ಪುತ್ರರಾದ ಶಶಾಂಕ್ ಗೌಡ ಹಾಗೂ ಹರ್ಷವರ್ಧನ್ ಗೌಡ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಜೈನ್ನಹಳ್ಳಿ ಗ್ರಾಮದಲ್ಲಿ ನಡೆಯಿತು. ಶಿವಣ್ಣ ಅವರ ಅಕಾಲಿಕ ನಿಧನಕ್ಕೆ ಚೆಸ್ಕಾಂ ಇಇ ಪುಟ್ಟಸ್ವಾಮಿ ಸೇರಿದಂತೆ ಚೆಸ್ಕಾಂ ಹಾಗೂ ಕೆಪಿಟಿಸಿಎಲ್ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು, ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸೇವಾಭಾವನೆ ಮತ್ತು ಸೌಮ್ಯ ಸ್ವಭಾವದಿಂದ ಸಹೋದ್ಯೋಗಿಗಳಲ್ಲಿ ಮೆಚ್ಚುಗೆ ಪಡೆದಿದ್ದ ಶಿವಣ್ಣ ಅವರ ಅಗಲಿಕೆಯಿಂದ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಲಾಯಿತು.
-ಶ್ರೀನಿವಾಸ್ ಆರ್.
