ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ಮೂಲಕ ಜಯ ಗಳಿಸಿದ ನಿರ್ದೇಶಕರನ್ನ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಅಭಿನಂದಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಸಹಕಾರ ಸಂಘಕ್ಕೆ ಚುನಾವಣೆ ಅನಿವಾರ್ಯ ನಂತರ ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡಬಾರದು,ಎಲ್ಲಾ ನಿರ್ದೇಶಕರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು ಸಂಘ ಅಭಿವೃದ್ಧಿ ಶ್ರಮಿಸಬೇಕು.ನಿಮ್ಮ ಅವಧಿಯಲ್ಲಿ ಸಹಕಾರ ಸಂಘದಿಂದ ರೈತರಿಗೆ ಕೊಡಬೇಕಾದ ಎಲ್ಲಾ ಸವಲತ್ತುಗಳನ್ನು ಕೊಟ್ಟು ಸಂಘದ ಸದಸ್ಯರಿಗೆ ಆರ್ಥಿಕವಾಗಿ ಸದೃಢಗೊಳುವ ರೀತಿಯಲ್ಲಿನೋಡಿಕೊಂಡರೆ ನಿಮಗೆ ರೈತರಿಂದ ಉತ್ತಮ ಆಡಳಿತಗಾರ ಎಂಬುವ ಹೆಗ್ಗಳಿಕೆಗೆ ಪಾತ್ರರಾಗುತ್ತೀರಿ.ಸಹಕಾರ ಸಂಘಗಳು ಗ್ರಾಮಗಳ ದೇಗುಲವಿದ್ದಂತೆ ಇದರಲ್ಲಿ ಯಾರು ಸಹ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಸಂಘವು ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ನೂತನ ನಿರ್ದೇಶಕರಿಗೆ ಕಿವಿಮಾತು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಜಯಂತಿ ಗುರುಮಲ್ಲೇಶ್, ಕಮಲಮ್ಮ ನಾಗರಾಜೇಗೌಡ,ಪದ್ಮಾ ಕುಮಾರಿ ಧರ್ಮೇಂದ್ರ, ಪಾರ್ವತಿ ಕೃಷ್ಣೆಗೌಡ, ಪ್ರೇಮ ರುದ್ರೇಗೌಡ ಮೀನಾಕ್ಷಿ ಮಂಜುನಾಯ್ಕ,ಮೈತ್ರಮ್ಮ ಲೇಟ್ ರಮೇಶ್,ಸವಿತಾ ಆನಂದ್, ಎಸ್.ಟಿ ಕ್ಷೆತ್ರ ರಾಜಮಣಿ ಮಂಜು ನಾಯ್ಕ,ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಕಾಳೇಗೌಡ,ಪಿ.ಪಿ ಶಿವಕುಮಾರ್,ಗ್ರಾ.ಪಂ ಸದಸ್ಯ ಮಂಜುಳಾ ಮಹೇಶ್,ಶಾಲೆ ಎಸ್.ಡಿ.ಎಂ.ಸಿ ನಿರ್ದೇಶಕ ಜಗದೀಶ್,ಗ್ರಾಮದ ಮುಖಂಡರಾದ ರವೀಶ್,ಸ್ವಾಮಿ ನಾಯ್ಕ ಯಜಮಾನ್ ಶಶಿ ನಾಯ್ಕ, ಮಂಜುನಾಥ್, ಆನಂದ್,ದಿಲೀಪ್ ಕುಮಾರ್, ಪಿ.ಮಹೇಶ್,ಪಿ.ಎಂ ಮಂಜುನಾಥ್,ಚೇತನ್ ಹೆಗ್ಗಡೆ, ವಿಕ್ರಂತ್ ಭಾಸ್ಕರ್,ಪಿ.ಕೆ ಚಂದನ್,ಸತೀಶ್ ಪಿ, ಪಿ.ಡಿ ಕೆಂಗೇಗೌಡ, ಸೋಮಚಾರಿ, ಪಿ.ಎಂ ರವಿ ಕುಮಾರ್,ಪರಮೇಶ್, ಸುರೇಶ ಅಂಗಡಿ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
