ಕೆ.ಆರ್.ಪೇಟೆ: ಯುವ ಜನತೆಯಲ್ಲಿ ಶಿಸ್ತು,ನಾಯಕತ್ವ ಹಾಗೂ ಸಂಘಟನೆ ಮುಖ್ಯ ಓದಿನೊಂದಿಗೆ ಕ್ರೀಡೆ ಯಲ್ಲೂ ತೊಡಗಿಸಿಕೊಳ್ಳುವುದರಿಂದ ಇವುಗಳು ಬೆಳೆಯಲು ಸಾಧ್ಯ ಶಿಕ್ಷಣದ ಜೊತೆ ಕ್ರೀಡೆಗೂ ಒತ್ತು ನೀಡಿದಾಗ ಆರೋಗ್ಯವಂತರಾಗಿರಬಹುದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷರಾದ ಗಂಜಿಗೆರೆ ಮಹೇಶ್ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ತೇರ್ನೇನಹಳ್ಳಿ ಗ್ರಾಮದ ಶ್ರೀ ಹನುಮಾನ್ ಕ್ರಿಕೆಟರ್ಸ್ ಯುವಕರ ಬಳಗದ ವತಿಯಿಂದ ತೇರ್ನ್ನೇನಹಳ್ಳಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿವನ್ನು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿ ಬಳಗದ ಅಧ್ಯಕ್ಷರಾದ ಗಂಜಿಗೆರೆ ಮಹೇಶ್ ಕ್ರೀಡಾಪಟುಗಳಿಗೆ ಶುಭಹಾರೈಸಿ ಮಾತನಾಡಿ, ಯುವಜನತೆ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಂಡು ಮುಂದೆ ದೇಶದ ಆಸ್ತಿಯಾಗಬೇಕು ಎಂದು ಹೇಳಿದ ಅವರು ಸಮಾಜ ಸೇವಕರಾದ ಆರ್.ಟಿ. ಓ ಮಲ್ಲಿಕಾರ್ಜುನ್ ರವರು ಈ ಸುಂದರ ಪಂದ್ಯಾವಳಿಗೆ ಆಗಮಿಸಿ ಈ ಪಂದ್ಯಾವಳಿಗ ಆಗಮಿಸಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ ಶುಭ ಕೋರಬೇಕಾಗಿತ್ತು ಕಾರಣಾಂತರಗಳಿಂದ ಅವರ ಮಾರ್ಗದರ್ಶನದಲ್ಲಿ ನಾನು ಆಗಮಿಸಿ ನಿಮಗೆ ಶುಭ ಕೋರುವ ಸುವರ್ಣ ಅವಕಾಶ ಕಲ್ಪಿಸಿದ್ದಾರೆ. ಕ್ರೀಡೆಯು ಆಡುವಾಗ ಪ್ರತಿಯೊಬ್ಬನು ಕ್ರೀಡಾ ಮನೋಭಾವದಿಂದ ಆಡಬೇಕು ಸೋಲು ಗೆಲುವು ಕ್ರೀಡೆಯಲ್ಲಿ ಸಾಮಾನ್ಯವಾಗಿದ್ದು ಗೆದ್ದವನು ಹಿಗ್ಗಬಾರದು ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಶರತ್, ವಿನಯ್, ಮಿಥುನ್,ಮಡುವಿನಕೋಡಿ ಉಮೇಶ್, ಪತ್ರಕರ್ತ ಕಾಮನಹಳ್ಳಿ ಮಂಜುನಾಥ್, ಜಗದೀಶ್,ಶ್ರೀ ಹನುಮಾನ್ ಕ್ರಿಕೆಟರ್ಸ್ ಯುವ ಬಳಗ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
