ಕೆ.ಆರ್.ಪೇಟೆ: ಸುಪ್ರೀಂ ಕೋರ್ಟಿನ ಸರ್ವೋಚ್ಚ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ವಿಕೃತಿ ಮನಸ್ಥಿತಿ ಕೋಮುವಾದಿ ವಕೀಲನೊಬ್ಬ ಕೋರ್ಟಿನ ಹಾಲಿನಲ್ಲಿ ಶೂ ಎಸೆದು ಅವಮಾನ ಮಾಡಿರುವುದನ್ನು ಖಂಡಿಸಿ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ತಾಲ್ಲೂಕು ಮಿನಿ ವಿಧಾನಸೌಧ ಮುಂದೆ ಕೆ.ಆರ್.ಪೇಟೆ ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಯೂ ಅಶೋಕ್ ರವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಲಿತ ಮುಖಂಡ ಹಾಗೂ ಪುರಸಭೆ ಸದಸ್ಯ ಡಿ.ಪ್ರೇಮ್ ಕುಮಾರ್, ವಕೀಲ ರಾಜೇಶ್ ಕಿಶೋರ್ ಎಂಬಾತನನ್ನು ಬಂಧಿಸಿ ದೇಶದ್ರೋಹಿ ಎಂದು ಘೋಷಿಸಬೇಕು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆಯುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸುತ್ತೇವೆ. ಸುಪ್ರೀಂ ಕೋರ್ಟಿನ ಸರ್ವೋಚ್ಚ ನ್ಯಾಯಾಧೀಶರ ಮೇಲೆ ಶೂ ಎಸೆದು ವಿಕೃತಿ ಮೆರೆದಿರುವ ಅವನನ್ನು ಬಂಧಿಸಿ ಮತ್ತೆ ಬಿಡಲಾಗಿದೆ ಎಂದರೆ ಮೋದಿ ಸರಕಾರ ಕೋಮುವಾದಿ ಮತ್ತು ಜನವಿರೋಧಿ ಸರಕಾರ ಎಂದು ಸಾಬೀತುಪಡಿಸಿದೆ. ಕೂಡಲೇ ಅವನನ್ನು ಮತ್ತೆ ಬಂಧಿಸಬೇಕು. ಅವನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ಬಳಿಕ ಮಾತನಾಡಿದ ದಲಿತ ಮುಖಂಡ ಬಸ್ತಿ ರಂಗಪ್ಪ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲೆತ್ನಿಸಿರುವುದು ನ್ಯಾಯಾಂಗ ಕ್ಕೆ ಮಾಡಿದ ಅಪಮಾನವಾಗಿದೆ. ವಕೀಲ ರಾಕೇಶ್ ಕಿಶೋರ್ ಶೂ ಎಸೆಯುವ ಮೂಲಕ ಕರಾಳ ಕಾನೂನನ್ನು ಪಾಲಿಸಬೇಕೆಂಬ ದುರ್ವರ್ತನೆ ಸರಿಯಲ್ಲ. ಸಂವಿಧಾನಾತ್ಮಕವಾಗಿ ಸ್ವತಂತ್ರವಾಗಿರುವ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನ ಮಾಡಿ ಸಂವಿಧಾನ ವಿರೋಧಿತನ ತೋರಿದ ರಾಕೇಶ್ ಕಿಶೋರ್ ಈ ಪ್ರಕರಣದ ಮೂಲಕ ದೇಶದ್ರೋಹಿಯಾಗಿ ಎಂದು ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ಮೂಲಕ ಸಂವಿಧಾನ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟಿಸಿ ತಹಸೀಲ್ದಾರ್ ಎಸ್.ಯೂ ಅಶೋಕ್ ಅವರಿಗೆ ಮನವಿ ಸಲ್ಲಿಸಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ: ಎಸ್.ಯೂ ಅಶೋಕ್ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ಹಿರಿಯ ಮುಖಂಡರಾದ ರಾಜಯ್ಯ, ಮಾಂಬಳ್ಳಿ ಜಯರಾಮ್,ಕಿಕ್ಕೇರಿ ರಾಜಣ್ಣ, ಕೃಷ್ಣಪುರ ಗಿರೀಶ್,ಸೋಮಸುಂದರ್, ಜೈನಹಳ್ಳಿ ಹರೀಶ್, ಲಕ್ಷ್ಮಿಪುರ ರಂಗಸ್ವಾಮಿ, ಅಲಂಬಾಡಿ ಕಾವಲು ಚನ್ನಕೃಷ್ಣ, ಸೋಮಶೇಖರ್, ಮುದುಗೆರೆ ಮಹೇಂದ್ರ,ಗಂಗಾಧರ್, ನಟನಹಳ್ಳಿ ರಮೇಶ್,ಜೈ ಭೀಮ್ ಜಿಲ್ಲಾ ಅಧ್ಯಕ್ಷ ಮಂಜುನಾಥ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
