ಕೆ.ಆರ್.ಪೇಟೆ: ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಇರುವ ಸರ್ವೆ ನಂ.24 ರಲ್ಲಿರುವ 2ಎಕರೆ ಗೋಮಾಳದ ಜಮೀನನ್ನು ಎಲ್ಲಾ ಸಮುದಾಯದ ನಿವೇಶನ ರಹಿತ ಬಡವರಿಗೆ ವಿತರಣೆ ಮಾಡಲು ಮೀಸಲಿಟ್ಟಿರುವ ಜಾಗದಲ್ಲಿ ಬಲಾಢ್ಯರು ಹಾಗೂ ಶ್ರೀಮಂತರು ಅಕ್ರಮವಾಗಿ ಹಾಕಿರುವ ಶೆಡ್ಡುಗಳನ್ನು ತೆರವುಗೊಳಿಸಿ ಶೀಘ್ರದಲ್ಲಿ ತೆರೆವುಗೊಳಿಸಬೇಕು. ಸದರಿ ನಿವೇಶನಗಳನ್ನು ಬಡವರಿಗೆ ಮಾತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಹರಿಹರಪುರ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ಹಾಗೂ ತಾಲ್ಲೂಕು ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಹರಿಹರಪುರ ಗ್ರಾಮಸ್ಥರು. ಮಹಿಳೆಯರು ಹರಿಹರಪುರ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಿದರು.
ಸರ್ವೆ ನಂ. 24ರಲ್ಲಿರುವ 2ಎಕರೆ ಗೋಮಾಳವನ್ನು ಹರಿಹರಪುರ ಗ್ರಾಮದ ಎಲ್ಲಾ ಸಮುದಾಯದ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಲು ಸರ್ಕಾರದಿಂದ 2018-19 ನೇ ಸಾಲಿನಲ್ಲಿ ನಿಗದಿಪಡಿಸಲಾಗಿರುತ್ತದೆ. ಆದರೆ ನಿವೇಶನ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನಿವೇಶನಗಳನ್ನು ಹಂಚದೇ ಮಾಡಿರುವುದಿಲ್ಲ. ಸದರಿ ನಿವೇಶನವನ್ನು ಆಶ್ರಯ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗದವರು ತೀರಾ ಕಡುಬಡವರಿಗೆ ಹಾಗೂ ನಿವೇಶನ ನೀಡುವಂತೆ ಹಲವು ಭಾರಿ ಒತ್ತಾಯ ಮಾಡುತ್ತಾ ಬಂದಿದ್ದರೂ ಸಹ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಸಕಾಲದಲ್ಲಿ ಹಂಚಿಕೆ ಮಾಡಿರಲಿಲ್ಲ.
ಇದರಿಂದಾಗಿ ಬಲಾಢ್ಯರು ರಾತ್ರೋರಾತ್ರಿ ಸದರಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರದಿಂದ ತಮಗಿಷ್ಟ ಬಂದಷ್ಟು ಅಳತೆಯ ನಿವೇಶನಗಳಿಗೆ ಶೆಡ್ಡುಗಳನ್ನು ನಿರ್ಮಾಣ ಮಾಡಿರುತ್ತಾರೆ. ಕೆಲವರು ಶಾಶ್ವತ ಮನೆಗಳನ್ನು ನಿರ್ಮಿಸಲು ಸಹ ಮುಂದಾಗಿರುತ್ತಾರೆ ಆದ್ದರಿಂದ ಸದರಿ ಅಕ್ರಮ ಶೆಡ್ಡುಗಳನ್ನು ತೆರವು ಮಾಡಬೇಕು. ಶೀಘ್ರವೇ ಹರಿಹರಪುರ ಗ್ರಾಮದ ಎಲ್ಲಾ ಬಡವರಿಗೆ ನಿವೇಶನವನ್ನು ಹಂಚಿಕೆ ಮಾಡಬೇಕು ಅಲ್ಲಿಯವರೆಗೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ನಡೆಸುತ್ತಿದ್ದರು.
ಸ.ನಂ.145 ಎರಡು ಎಕರೆ 32ಗುಂಟೆ ಜಮೀನು 1950ರಲ್ಲಿ ಸ್ವಾಧೀನವಾಗಿದೆ ಇದೂವರೆವಿಗೂ ಹಕ್ಕುಪತ್ರ ನೀಡಿಲ್ಲ. ಸ.ನಂ.146ರಲ್ಲಿ 1ಎಕರೆ 11ಗುಂಟೆ, ಸ.ನಂ.127 ರಲ್ಲಿ 9ಗುಂಟೆ, ಮತ್ತು 24ಗುಂಟೆ, ಸ.ನಂ.146ರಲ್ಲಿ 7ಗುಂಟೆ, ಸ.ನಂ.19ರಲ್ಲಿ 2ಎಕರೆ 18ಗುಂಟೆ ಜಮೀನುಗಳು ಹರಿಹರಪುರ ಗ್ರಾಮದ ಬಡರಿಗೆ ಹಾಗೂ ವಸತಿ ರಹಿತರಿಗೆ ನಿವೇಶನ ಮತ್ತು ಆಶ್ರಯ ಮನೆ ನೀಡುವ ಉದ್ದೇಶಗಳಿಗೆ ಭೂಸ್ವಾಧೀನವಾಗಿವೆ ಆದರೆ ಯಾರಿಗೂ ಸರಿಯಾಗಿ ಅಳತೆ ಮಾಡಿ ಹಕ್ಕುಪತ್ರ ನೀಡಿರುವುದಿಲ್ಲ. ಹಾಗಾಗಿ ತುರ್ತಾಗಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಆಡಳಿತವು ಕ್ರಮ ವಹಿಸಿ ವಸತಿ ರಹಿತ ಎಲ್ಲಾ ಸಮುದಾಯದ ಬಡವರಿಗೆ ಸದರಿ ನಿವೇಶನಗಳನ್ನು ವಿತರಣೆ ಮಾಡಲು ಕ್ರಮ ವಹಿಸಬೇಕು. ಈ ಎಲ್ಲಾ ಭೂಸ್ವಾಧೀನವನ್ನು ಕೆಲವುರು ಒತ್ತುವರಿ ಮಾಡಿಕೊಂಡಿದ್ದ ತಕ್ಷಣ ತೆರವು ಮಾಡಿಸಬೇಕು ಎಂದು ಇದೇ ವೇಳೆ ಹಲವು ಹಕ್ಕೊತ್ತಾಯಗಳನ್ನು ಪ್ರತಿಭಟನಾಕಾರರು ಮಂಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಷ್ಮಾ, ಪಿಡಿಓ ನಾಯಿದಾ ಅಖ್ತರ್, ಆಡಳಿತಾಧಿಕಾರಿ ಡಾ.ಹೆಚ್.ಎಸ್.ದೇವರಾಜು ಅವರು ನೇತೃತ್ವದ ಅಧಿಕಾರಿಗಳು ಈಗಾಗಲೇ ಹಲವಾರು ಗುಡಿಸಲು ಶೆಡ್ಡುಗಳನ್ನು ತೆರವುಗೊಳಿಸಲಾಗಿದೆ. ಉಳಿದ 9ಶೆಡ್ಡುಗಳ ವ್ಯಕ್ತಿಗಳು ಹಾಕಿದ್ದ ಕಬ್ಬಣದ ಕಂಬಗಳು, ಶೀಟುಗಳು, ಮೇಲ್ಚಾವಣಿಗಳನ್ನು ನಾಶಪಡಿಸಬೇಡಿ, ನಾವೇ ಬಿಚ್ಚಿಕೊಳ್ಳುತ್ತೇವೆ ಒಂದೆರಡು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿರುತ್ತಾರೆ. ಮಾನವೀಯ ದೃಷ್ಠಿಯಿಂದ ಮೂರು ದಿನಗಳ ಕಾಲ ಬೆಲೆ ಬಾಳುವ ಕಬ್ಬಿಣದ ಕಂಬಗಳು, ಮೇಲ್ಚಾವಣಿಗಳನ್ನು ಬಿಚ್ಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10ಗಂಟೆಯಿಂದಲೇ ಪೂರ್ಣವಾಗಿ ತೆರವುಗೊಳಿಸಿ ನಿವೇಶನ ಹಂಚಿಕೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಶುಕ್ರವಾರ ತೆರವು ಮಾಡದೇ ಇದ್ದಲ್ಲಿ ತಾಲ್ಲೂಕು ಪಂಚಾಯತ್ ಕಚೇರಿಯ ಮುಂದೆ ಅನಿರ್ಧಿಷ್ಠಾವಧಿ ಬೃಹತ್ ತಮಟೆ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ಮತ್ತು ಇಓ ಅವರನ್ನು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ಮುಖಂಡರಾದ ನರಸಿಂಹ, ಹೆಚ್.ಎಸ್.ಶರ್ಮ, ರಾಜಮ್ಮ, ಚೆಲುವರಾಜು, ರಂಗರಾಮು, ದೇವರಾಜು, ಡಿ.ಪ್ರೇಮಕುಮಾರ್, ಬಿ.ಜಿ.ಗಿರೀಶ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ರಾಜಯ್ಯ, ಸೋಮಸುಂದರ್, ಚೌಡೇನಹಳ್ಳಿ ದೇವರಾಜು, ಎನ್.ಜೆ.ಮಂಜು, ಲಕ್ಷ್ಮೀ ಪುರ ರಂಗಸ್ವಾಮಿ, ಬಂಡಿಹೊಳೆ ರಮೇಶ್, ತೆಂಡೇಕೆರೆ ನಿಂಗಯ್ಯ, ಜಿಡಿಎಸ್ ಗಂಗಾಧರ್, ಕಳ್ಳನಕೆರೆ ಶಂಕರ್, ನಾರಾಯಣ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ:06.ಕೆ.ಆರ್.ಪಿ-03: ಕೆ.ಆರ್.ಪೇಟೆ: ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಇರುವ ಸರ್ವೆ ನಂ.24 ರಲ್ಲಿರುವ 2ಎಕರೆ ಗೋಮಾಳದ ಜಮೀನನ್ನು ಎಲ್ಲಾ ಸಮುದಾಯದ ನಿವೇಶನ ರಹಿತ ಬಡವರಿಗೆ ವಿತರಣೆ ಮಾಡಲು ಮೀಸಲಿಟ್ಟಿರುವ ಜಾಗದಲ್ಲಿ ಬಲಾಢ್ಯರು ಹಾಗೂ ಶ್ರೀಮಂತರು ಅಕ್ರಮವಾಗಿ ಹಾಕಿರುವ ಶೆಡ್ಡುಗಳನ್ನು ತೆರವುಗೊಳಿಸಿ ಶೀಘ್ರದಲ್ಲಿ ತೆರೆವುಗೊಳಿಸಬೇಕು. ಸದರಿ ನಿವೇಶನಗಳನ್ನು ಬಡವರಿಗೆ ಮಾತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಹರಿಹರಪುರ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ಹಾಗೂ ತಾಲ್ಲೂಕು ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಹರಿಹರಪುರ ಗ್ರಾಮಸ್ಥರು. ಮಹಿಳೆಯರು ಹರಿಹರಪುರ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಿದರು.
============================
