ಕೆ.ಆರ್.ಪೇಟೆ,ಅ.19 : ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ರೈತರ ಅಭಿವೃದ್ಧಿಗೆ ಕೃಷಿ ಜೊತೆಗೆ ಹೈನುಗಾರಿಕೆಯು ವರದಾನವಾದ ಉಪ ಕಸಬು ಆಗಿದೆ. ಹಾಗಾಗಿ ರೈತರು ಬೇಸಾಯದ ಜೊತೆ ಜೊತೆಗೆ ಹೈನುಗಾರಿಕೆ, ಮೇಕೆ, ಕುರಿ, ಕೋಳಿ ಸಾಕಾಣಿಕೆಯನ್ನು ರೂಢಿಸಿಕೊಳ್ಳಬೇಕು. ಕೃಷಿಯಲ್ಲಿ ನಷ್ಟ ಉಂಟಾದರೂ ಆಗಬಹುದು ಆದರೆ ನಮ್ಮ ಹೈನುಗಾರಿಕೆಯಲ್ಲಿ ಯಾವುದೇ ನಷ್ಟವಾಗುವುದಿಲ್ಲ.ನಮಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸಾಕು ಪ್ರತಿ ವಾರವೂ ಹಾಲಿನ ಹಣ ನೀಡುತ್ತೇವೆ. ಜೊತೆಗೆ ಸರ್ಕಾರದಿಂದಲೂ ಗುಣಮಟ್ಟದ ಹಾಲು ಪೂರೈಕೆ ಮಾಡಿದ ರೈತರಿಗೆ ಪ್ರತಿ ಲೀಟರ್ಗೆ 5ರೂ ಪ್ರೋತ್ಸಾಹ ಧನ ರೈತರಿಗೆ ಸಿಗುತ್ತದೆ.
ಅಮೃತ ಸಮಾನವಾದ ಹಾಲಿಗೆ ಯಾರೂ ಸಹ ಕಲಬೆರಕೆ ಮಾಡಬಾರದು ಎಂದು ಡಾಲು ರವಿ ಸಲಹೆ ನೀಡಿದರು. ನಮ್ಮ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬಳಗದಿಂದ ಹಾಲು, ಮೊಸಲು, ತುಪ್ಪ ಸೇರಿದಂತೆ ಎಲ್ಲಾ ಬಗೆಯ ಸಿಹಿ ತಿನಿಸುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಆದ್ದರಿಂದ ರೈತರು, ಸಾರ್ವಜನಿಕರು ತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ನಂದಿನಿ ಉತ್ಪನ್ನಗಳನ್ನೇ ಬಳಕೆ ಮಾಡುವ ಮೂಲಕ ರೈತರ ಸಂಸ್ಥೆಯಾದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ, ಕೆ.ಎಂ.ಎಫ್, ಹಾಗೂ ತಮ್ಮ ಗ್ರಾಮದ ಹಾಲಿನ ಡೇರಿಯ ಅಭಿವೃದ್ಧಿಗೆ ಕೈಜೋಡಿಸಬೇಕು. ಬೇರೆ ಬೇರೆ ಕಂಪನಿಯ ಉತ್ಪನ್ನಗಳನ್ನು ಕೊಳ್ಳುವ ಬದಲು ನಂದಿನಿ ಉತ್ಪನ್ನಗಳನ್ನು ಖರೀದಿ ಮಾಡಿ ಉಪಯೋಗಿಸಿದರೆ ಪರೋಕ್ಷವಾಗಿ ರೈತರಿಗೆ ಸಹಾಯ ಮಾಡಿದಂತಾಗುತ್ತದೆ.
ನಮ್ಮ ನಂದಿನಿ ಉತ್ಪನ್ನಗಳು ಎಷ್ಟು ಸುರಕ್ಷಿತ ಹಾಗೂ ಗುಣಮಟ್ಟ ಇದೆ ಎಂಬುದಕ್ಕೆ ತಿರುಪತಿಯಲ್ಲಿ ತಯಾರಿಸಲಾಗುವ ಲಡ್ಡು ಪ್ರಸಾದಕ್ಕೆ ನಮ್ಮ ನಂದಿನಿ ತುಪ್ಪವನ್ನು ತಿರುಪತಿ-ತಿರುಮಲ ದೇವಸ್ಥಾನ ಆಡಳಿತ ಮಂಡಳಿಯು ಆಮದು ಮಾಡಿಕೊಳ್ಳುತ್ತಿದೆ. ದೇವರಿಗೆ ನಮ್ಮ ನಂದಿನಿ ಉತ್ಪನ್ನಗಳು ಬಳಕೆ ಮಾಡಲಾಗುತ್ತದೆ ಎಂದರೆ ನಮ್ಮ ನಂದಿನಿಯ ಗುಣಮಟ್ಟದ ಎಂತದ್ದು ಎಂಬುದನ್ನು ನಾವೂ ಹೇಳಬೇಕಾಗಿಲ್ಲ ಗ್ರಾಹಕರಿಗೆ ಸುಲಭವಾಗಿ ಮನವರಿಕೆಯಾಗುತ್ತದೆ ಹಾಗಾಗಿ ನಮ್ಮ ರಾಜ್ಯದ ಎಲ್ಲಾ ಗ್ರಾಹಕರು ನಮ್ಮ ಕರ್ನಾಟಕ ಹಾಲು ಒಕ್ಕೂಟದಿಂದ ತಯಾರಾಗುವ ನಂದಿನಿ ಉತ್ಪನ್ನಗಳನ್ನೇ ಬಳಕೆ ಮಾಡುವಂತೆ ಡಾಲು ರವಿ ಮನವಿ ಮಾಡಿದರು.

ಸಂಘದ ಅಧ್ಯಕ್ಷೆ ಲಲಿತಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಟಿ.ಕರಿಶೆಟ್ಟರು, ನಾಗೇಶ್, ಸಂಘದ ಅಧ್ಯಕ್ಷೆ ಲಲಿತಸೋಮಶೇಖರ್, ಉಪಾಧ್ಯಕ್ಷೆ ರುಕ್ಮಿಣಿನಂಜೇಗೌಡ, ನಿರ್ದೇಶಕರಾದ ಪೂರ್ಣಿಮವಿಷಕಂಠಮೂರ್ತಿ, ಗೌರಮ್ಮಜಯರಾಂ, ಮಣಿಯಮ್ಮಅಣ್ಣೇಗೌಡ, ರಾಧಾನಂಜೇಗೌಡ, ಬಿ.ಎಂ.ಆಶಾಓಂಕಾರಮೂರ್ತಿ, ವೇದಾವತಿಕೃಷ್ಣೇಗೌಡ, ಲಲಿತಮ್ಮಶಿವಕುಮಾರ್, ಜಯಮ್ಮರಾಮಕೃಷ್ಣ, ಕಲಾವತಿಪ್ರಕಾಶ್, ಮುಖಂಡರು ಹಾಗೂ ನಾಮಧಾರಿ ಸಮುದಾಯದ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಮುಖಂಡರಾದ ಮುದ್ದೇಗೌಡ, ಲಕ್ಷ್ಮೀನಾರಾಯಣ್, ಯಜಮಾನ್ ಕೆಂಪಶೆಟ್ಟರು, ದೊಡ್ಡಭೈರಯ್ಯ, ಬಸವರಾಜು, ರಾಮಕೃಷ್ಣ, ಎ.ಇ.ಕೃಷ್ಣ, ರಾಜೇಗೌಡ, ಹೇಮಂತಕುಮಾರ್, ಎ.ಡಿ.ಗಣೇಶ್, ರವಿಕುಮಾರ್, ಯು.ಆರ್.ರಘುಪತಿ, ಎ.ಎಸ್.ಜವರಯ್ಯ, ಶಾಂತೇಗೌಡ, ಮಾಯೀಗೌಡ, ಆನಂದಚಾರ್, ಬಸವಚಾರ್, ಸೋಮಶೇಖರ್, ಸಂಘದ ಕಾರ್ಯದರ್ಶಿ ಮಹಾದೇವಮ್ಮಬಸವರಾಜು, ಹಾಲು ಪರೀಕ್ಷಕ ವೀಣಾ ಗುರುಮೂರ್ತಿ, ಸುಶೀಲಮ್ಮಕರಿನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:19.ಕೆ.ಆರ್.ಪಿ-02: ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಭೂಮಿ ಪೂಜೆ ನೆರವೇರಿಸಿದರು.
ವರದಿ : ಶ್ರೀನಿವಾಸ್ ಆರ್
===============================

[…] […]