ಕೆ.ಆರ್.ಪೇಟೆ: ವಿಶೇಷ ಚೇತನರಿಗೆ ಅನುಕಂಪಬೇಡ ಅವಕಾಶ ನೀಡಿ. ಸರಕಾರ ಶೇ.5 ಮೀಸಲಾತಿ ಕಲ್ಪಿಸಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ನಿವೃತ್ತ ಪ್ರಾಂಶುಪಾಲ ಕಾಳೇಗೌಡ ತಿಳಿಸಿದರು.
ಪಟ್ಟಣದಲ್ಲಿರುವ ಶ್ರೀ ರಮಣ ಮಹರ್ಷಿ ಅಕಾಡೆಮಿ ಪಾರ್ ದಿ ಬ್ಲಾoಡ್ ವತಿಯಿಂದ ಸಮುದಾಯದ ಆಧಾರಿತ ಪುನರ್ವಸತಿ ಯೋಜನೆ ಹಾಗೂ ವಿಶೇಷ ಚೇತನರ ಹಿತರಕ್ಷಣೆ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶೇಷಚೇತನರು ದೇವರ ಮಕ್ಕಳು, ನಾವು ಎಲ್ಲ ಸರಿಯಿದ್ದವರು ಆ ಮಕ್ಕಳನ್ನು ಸರಿದಾರಿಗೆ ತರಲು ಸಹಕರಿಸಬೇಕು.ವಿಶೇಷಚೇತನ ಮಕ್ಕಳೆಂದು ಯಾರೂ ಕಡೆಗಣಿಸಬಾರದು ಅವರ ಜೀವನದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಲು ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯಲು ಸರಕಾರ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸರ್ಕಾರದ ಜೊತೆಯಾಗಿ ಶ್ರೀ ರಾಮಣ್ಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲಾಂಡ್ ಅವರಲ್ಲಿರುವ ಕೌಶಲಗಳನ್ನು ಗುರುತಿಸಿ ಅವರ ಸಾಧನೆಗೆ ಸಲಕರಣೆ ನೀಡಿ ನೀಡುತ್ತಾ ಬಂದಿದೆ ಪೋಷಕರು ಕೂಡ ತಮ್ಮ ಮಕ್ಕಳ ಆಸಕ್ತಿ ಕ್ಷೇತ್ರಕ್ಕೆ ಸಹಕರಿಸಿ ಮುಂದುವರಿಯಲು ಬಿಡಬೇಕು. ತಾಲೂಕಿನಲ್ಲಿ ನೂರಾರು ವಿಶೇಷಚೇತನ ಮಕ್ಕಳಿದ್ದಾರೆ. ವಿಶೇಷಚೇತನ ಮಕ್ಕಳು ನಾವು ಯಾವುದರಲ್ಲೂ ಕಡಿಮೆ ಇಲ್ಲವೆಂದು ಸಾಧಿಸಿ ತೋರಿಸಬೇಕು ಇಂತಹ ಮಕ್ಕಳಿಗೆ ನನ್ನ ಸಹಕಾರ ಇರುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ರಮಣ ಮಹರ್ಷಿ ಫಾರ್ ದಿ ಬ್ಲೈಂಡ್ ಯೋಜನೆಯ ನಿರ್ದೇಶಕ ಸಂತೋಷ್ ಕುಮಾರ್ ಪಾಂಡೆ ನಮ್ಮ ಸಂಸ್ಥೆಯಿಂದ ಹಲವಾರು ವರ್ಷಗಳಿಂದ ವಿಶೇಷ ಚೇತನರಿಗೆ ಅವಕಾಶ ನಿರ್ಮಿಸುವ ಸೂಕ್ತ ವೇದಿಕೆಯಾಗಿ ಅವರ ಆಶೋತ್ತರಗಳಿಗೆ ಸಹಕಾರಿಯಾಗಿದೆ ಆ ನಿಟ್ಟಿನಲ್ಲಿ ಇಂದು ಕೆ.ಆರ್.ಪೇಟೆ ತಾಲೂಕು ವಿಶೇಷ ಚೇತನ ಹಿತ ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನ ವ್ಯಕ್ತಿ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಕರಣೆಗಳು,ನೋಟ್ ಬುಕ್, ನೀಡಿದ್ದೇವೆ ಎಂದ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶೇಷ ಚೇತನರಿಗೆ ಸನ್ಮಾನಿಸಿದರು.

ತಾಲೂಕು ವಿಶೇಷ ಚೇತನ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ನಿಂಗರಾಜುಗೌಡ,ಅಧ್ಯಕ್ಷ ಬಂಕ್ ಮಂಜುನಾಥ್ ಸರ್ಕಾರದ ವಿವಿಧ ಯೋಜನೆಗಳ ಪರಿಚಯ ಮಾಡಿ ಹಲವು ಸಲಕರಣೆಗಳನ್ನು ವಿತರಿಸಿ ಶ್ರೀ ರಮಣ ಮಹರ್ಷಿ ಫಾರ್ ದಿ ಬ್ಲೈಂಡ್ ವತಿಯಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ್ ಹಿರೇಮಠ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಶೇಷ ಚೇತನ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಬಳಿಕ ವಿಶೇಷ ಚೇತನ ಮಕ್ಕಳು ನೃತ್ಯ, ಸಂಗೀತ, ಏಕಪಾತ್ರ ಅಭಿನಯ ಸೇರಿದಂತೆ ಅನೇಕ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದ ಮೆರವ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಯೊಗೇಂದ್ರ, ರಾಜೇಶ್,ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್ ತಾಲೂಕು ಸಂಯೋಜಕ ಹೆಚ್.ಎನ್ ಪ್ರತಾಪ್, ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಜೀಗೆರೆ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ್ಕೆ ಶಾಂತವ್ವ, ಆಶಾ,ಶ್ರೀ ಮಾತೃ ಭೂಮಿ ವೃದ್ಧ ಆಶ್ರಮ ನಾಗಣ್ಣ, ಶ್ರೀ ರಮಾಣ ಮಹರ್ಷಿ ಸಂಸ್ಥೆಯ ಸ್ವಯಂ ಸೇವಕ ರಾದ ಪ್ರೇಮಲತಾ, ಜಲೇಂದ್ರ,ಕುಂದನಹಳ್ಳಿ ವಸಂತ ಕುಮಾರಿ, ಭವ್ಯ ,ನಾಗರತ್ನ,ಪ್ರೇಮಲತಾ, ಲಕ್ಷ್ಮಿದೇವಿ,ವಿಶೇಷ ಚೇತನರ ಪೋಷಕರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಇದನ್ನು ಓದು: ಕೆ.ಆರ್.ಪೇಟೆ: ವಿಶೇಷ ಚೇತನರಿಗೆ ಅನುಕಂಪಬೇಡ … […]