ಕೆ.ಆರ್.ಪೇಟೆ:ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಸಾರ್ಥಕವಾಗಬೇಕು ಎಂದು ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕಿನ ಕಿಕ್ಕೇರಿ ಗ್ರಾಮದ ಕುರುಹಿನಶೆಟ್ಟಿ ಸಭಾ ಭವನದಲ್ಲಿ ಶ್ರೀ ಧರ್ಮಸ್ಥಳ ಯೋಜನೆ ವತಿಯಿಂದ ಏರ್ಪಡಿಸಿದ 2015ನೇ ಮಧ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕುಡಿತದ ಚಟದಿಂದ ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಹಾಗಾಗಿ ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೇ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು.ಮದ್ಯಸೇವನೆ ಸಮಾಜದ ದುಷ್ಟಟಗಳಲ್ಲಿ ಒಂದಾಗಿದೆ ಇದು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ಸಮಾಜದಿಂದ ಹೊರ ಓಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರಂತರ ಶ್ರಮಸಿಸುತ್ತಿರುವುದು ಶ್ಲಾಘನೀಯ. ಈಗಾಗಲೇ 2015 ಶಿಬಿರಗಳನ್ನು ಪೂರೈಸಿ ಸಾವಿರಾರು ಕುಟುಂಬಗಳ ಉಳಿವಿಗೆ ಕಾರಣವಾಗಿದೆ ಎಂದ ಅವರು ಕುಡಿತದ ಅಮಲಿನಲ್ಲಿ ಮನೆಯಲ್ಲಿ ಅಸಭ್ಯವಾಗಿ ವರ್ತಿಸುವುದು, ಹೊಡೆಯುವುದು, ಜಗಳವಾಡುವುದು, ಮುಂತಾದ ಕಾರಣಗಳಿಂದ ಮನೆ ಜಗಳ ಬೀದಿಗೆ ಬರುವುದಲ್ಲದೆ, ಕುಟುಂಬದ ಮಾನ ಮರ್ಯಾದೆ ಸಹ ಹೋಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಘಟನೆಗಳು ಸಹ ವರದಿಯಾಗಿದೆ. ಆದ್ದರಿಂದ ಯುವಕರು ಕುಡಿತವನ್ನು ಬಿಟ್ಟು ವಿದ್ಯಾವಂತರಾಗಿ ದೇಶದ ಸತ್ಪಜೆಗಳಾಗಿ ರೂಪಗೊಳ್ಳಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕ ಡಾ: ಯೋಗೇಶ್* ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2015ನೇ ಮದ್ಯವರ್ಜನ ಶಿಬಿರವನ್ನು ಕಿಕ್ಕೇರಿ ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದು ಮದ್ಯವ್ಯಸನಿಗಳಿಗಾಗಿ 7:ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಈಗಾಗಲೇ ಮದ್ಯ ವ್ಯಸನಕ್ಕೆ ಒಳಗಾಗಿರುವವರು ಶಿಬಿರದ 7 ದಿನಗಳು ಇಲ್ಲೇ ಇರಬೇಕಾಗಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಆರೋಗ್ಯ ತಪಾಸಣೆ, ಗಣ್ಯರಿಂದ ಮಾರ್ಗದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮದ್ಯಪಾನದಿಂದಾಗುವ ದುಷ್ಟಪರಿಣಾಮಗಳು ಹಾಗೂ ಮದ್ಯಪಾನ ಬಿಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ಮದ್ಯಪಾನ ಬಿಡುವಂತೆ ಮಾಡಲಾಗುವುದು. ಶಿಬಿರದಲ್ಲಿ ಭಾಗವಹಿಸಿರುವ ಮದ್ಯವ್ಯಸನಿಗಳು ಸಂಯಮದಿಂದ ಇದ್ದು ಶಿಬಿರ ಮುಗಿದ ನಂತರ ಮದ್ಯಪಾನ ಬಿಟ್ಟು ಸಂತೋಷವಾಗಿ ಕುಟುಂಬದೊಂದಿಗೆ ಬಾಳಬೇಕು ಎನ್ನುವುದು ಶ್ರೀ ಕ್ಷೇತ್ರದ ಆಶಯವಾಗಿದೆ ಎಂದರು.
ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಸದಸ್ಯ ಗೋವಿಂದನಹಳ್ಳಿ ಕುಮಾರ್* ಯುವಜನತೆ ಮದ್ಯ ಸೇವನೆಯಿಂದ ಹಾಳಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ದೇಶಾದ್ಯಂತ ಯುವಕರ ಸಂಖ್ಯೆ ಹೆಚ್ಚಿದ್ದು, ಯುವಶಕ್ತಿ ವಿದ್ಯಾವಂತರಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕಾಗಿದೆ ಎಂಬುವುದೇ ಕಾಮಂದರ ದೂರದೃಷ್ಟಿ ಕನಸು ಎಂದರು.
ಕಾರ್ಯಕ್ರಮದಲ್ಲಿ ಕಿಕ್ಕೇರಿ ಶ್ರೀ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪ್ರಸಾದ್, ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ವೇದಿಕೆಯ ನಿರ್ದೇಶಕ ಮೊಟ್ಟೆ ಮಂಜು,ನಾರಾಯಣಗೌಡ, ಸುನಿತಾ ದಯಾನಂದ,ಡಿ.ಸಿ ಕುಮಾರ್,ಜೆಡಿಎಸ್ ಮುಖಂಡ ಕೃಷ್ಣೆಗೌಡ,ಸಿದ್ದಾಪುರ ರಂಗೇಗೌಡ,ಶಿಬಿರಧಿಕಾರಿ ದಿನೇಶ್ ಮರಾಠಿ,ಅರೋಗ್ಯ ಸಹಾಯಕ ವೆಂಕಟೇಶ್, ಕಿಕ್ಕೇರಿ ಮೇಲ್ವಿಚಾರಕಿ ಯಶೋದಾ,ರವೀಶ್, ಮದು, ಕೃಷಿ ಮೇಲ್ವಿಚಾರಕರು ಪ್ರವೀಣ್ ಜ್ಞಾನ ವಿಕಾಸ ಮೇಲ್ವಿಚಾರಕರು ನಂದಿನಿ. ಸಂಗೀತ ದಿನೇಶ್,ನೇತ್ರಾವತಿ,ಚೈತ್ರ, ಗುಣಶ್ರೀ, ಸೇವಾಪ್ರತಿನಿಧಿಗಳು ಹಾಗೂ ಶಿಬಿರಾರ್ಥಿಗಳ ಕುಟುಂಬಸ್ಥರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
