ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಗ್ರಾಮ ಪಂಚಾಯತಿ ನೂತನವಾಗಿ ಅಧ್ಯಕ್ಷರಾಗಿ ಎಳನೀರು ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಪೂರ್ಣಿಮಾ ಆನಂದ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿದ್ದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಯಸಿ ಎಳನೀರು ಜಗದೀಶ್ ಬಿಟ್ಟರೆ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಎಳನೀರು ಜಗದೀಶ್ ಪಂಚಾಯತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬೋರಯ್ಯ ಘೋಷಿಸಿದರು.ಸಹ ಚುನಾವಣಾ ಅಧಿಕಾರಿಯಾಗಿ ಪಿಡಿಒ ರವಿಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಎಳನೀರು ಜಗದೀಶ್ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷರಾಗಲು ಮಾರ್ಗದರ್ಶನ ನೀಡಿದ ನಮ್ಮ ನಾಯಕರು ಶಾಸಕರಾದ ಹೆಚ್.ಟಿ ಮಂಜು,ಹೆಚ್.ಟಿ ಲೋಕೇಶ್ ನನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಸಹಕಾರ ನೀಡಿದ ಸದಸ್ಯರುಗಳು ನಮ್ಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ, ಹಿತೈಷಿಗಳಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಉಳಿದಿರುವ ಕಡಿಮೆ ಅಧಿಕಾರದ ಅವಧಿಯಲ್ಲಿ ಪಕ್ಷ ಭೇದ ಮರೆತು ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿ ವ್ಯಾಪಿಯ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿಯನ್ನು ವಹಿಸುತ್ತೇನೆ.ರಸ್ತೆ ಚರಂಡಿ ಅಭಿವೃದ್ಧಿ,ಶುದ್ಧ ಕುಡಿಯುವ ನೀರು ಸರಬರಾಜು,ಬೀದಿ ದೀಪಗಳ ಅಭಿವೃದ್ಧಿ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನು ಓದಿ: ಬೆಂಗಳೂರು ಕಾಮಿಕ್ ಕಾನ್ಗೆ ಅದ್ಧೂರಿ ಚಾಲನೆ- ಪಾಪ್ ಕಲ್ಚರ್ ಸಂಭ್ರಮಕ್ಕೆ ಸಾವಿರಾರು ಅಭಿಮಾನಿಗಳ ಉತ್ಸಾಹಭರಿತ ಭಾಗವಹಿಸುವಿಕೆ
ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರ್ ನೂತನ ಅಧ್ಯಕ್ಷರಾದ ಎಳನೀರು ಜಗದೀಶ್ ಅವರನ್ನ ಅಭಿನಂದಿಸಿ ಮಾತನಾಡಿದರು ಸರ್ವ ಸದಸ್ಯರು ಕೂಡ ಪಕ್ಷ ಭೇದ ಮರೆತು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ ಅದಕ್ಕೆ ಋಣಿಯಾಗಿ ನೂತನ ಅಧ್ಯಕ್ಷರು ಗ್ರಾ.ಪಂ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಗೆ ಬರುವ ಪ್ರತಿಯೊಂದು ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಪಂಚಾಯತಿಯನ್ನು ತಾಲೂಕಿನಲ್ಲಿ ಮಾದರಿಯನ್ನಾಗಿ ಮಾಡಲು ಶ್ರಮವಹಿಸಬೇಕು ಸಲಹೆ ನೀಡಿದರು.

ನೂತನ ಅಧ್ಯಕ್ಷರ ಆಯ್ಕೆಯಾದ ಹಿನ್ನೆಲೆ ಪಂಚಾಯತಿ ವ್ಯಾಪ್ತಿಯ ಮುಖಂಡರು ಹಾಗೂ ಪಂಚಾಯತಿ ಸದಸ್ಯರುಗಳು ಸೇಬಿನ ಬೃಹತ್ ಹಾರ ಹಾಕಿ,ಸಿಹಿ ವಿತರಣೆ ಮಾಡುವ ಮೂಲಕ ಅಭಿನಂದಿಸಿದರು.
ಗ್ರಾ. ಪಂ ಉಪಾಧ್ಯಕ್ಷೆ ನಂದಿನಿ ಅರುಣ್ ಕುಮಾರ್,ಸದಸ್ಯರಾದ ಧನಂಜಯ್, ಲಲಿತ, ದೇವರಾಜು, ಶೇಖರ್, ಹೆಚ್.ಟಿ ಜಗದೀಶ್,ಪೂರ್ಣಿಮಾ, ಕವಿತ, ಬಿ.ಎಸ್ ಪುಷ್ಪ,ಪುನೀತ್ ಕುಮಾರ್,ಹೆಚ್.ಎಸ್ ಕುಮಾರಸ್ವಾಮಿ,ರುಕ್ಮಿಣಿ, ರತ್ನಮ್ಮ, ಲೀಲಾವತಿ, ಶೋಭ,ಮುರುಕನಹಳ್ಳಿ ಸೊಸೈಟಿ ಅಧ್ಯಕ್ಷ ಎಂ.ಬಿ ರಮೇಶ್,ಮುಖಂಡರಾದ ಅಣ್ಣೆಗೌಡ, ಎಂ ಎಸ್ ಶಿವಕುಮಾರ್,ತಮ್ಮೆಗೌಡ, ಪ್ರಕಾಶ್, ಮದೆವ್, ಆನಂದ್,ಹೊಂನೇಶ್, ಕಿಟ್ಟಿ,ಮಂಜುನಾಥ್,ರಮೇಶ್,ಸುನಿಲ್, ರಕ್ಷಿತ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಇದನ್ನು ಓದಿ: ಕೆ.ಆರ್.ಪೇಟೆ: ಮುರುಕನಹಳ್ಳಿ ಗ್ರಾ.ಪಂ ಅಧ್ಯ… […]