ಕೆ.ಆರ್.ಪೇಟೆ,ಡಿ.23: ಪಟ್ಟಣದಲ್ಲಿ ಎಂಬ್ರಾಯಿಡರಿ ಕೆಲಸಕ್ಕೆ ಬಿಹಾರ, ಪಶ್ಚಿಮಬಂಗಾಳ *ರಾಜ್ಯಗಳಿಂದ* ವಲಸೆ ಬಂದಿರುವ ಕೆಲಸಗಾರರು ಪುರಸಭೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ, ಎಂಬ್ರಾಯಿಡರಿ ಕೆಲಸಕ್ಕೆ ನಿಗಧಿತ ದರಕ್ಕಿಂತ ಕಡಿಮೆ ಶುಲ್ಕ ಪಡೆಯುತ್ತಿದ್ದು, ಇದು ವೃತ್ತಿನಿರತ ಎಂಬ್ರಾಯಿಡರಿ ಕೆಲಸಗಾರರಿಗೆ ಭಾರಿ ತೊಂದರೆಯಾಗುತ್ತಿದೆ. ಅಲ್ಲದೆ ಬಿಹಾರಿಗಳು ಮತ್ತು ಪಶ್ಚಿಮ ಬಂಗಾಳದವರು ಸ್ಥಳೀಯ ಭಾಷಿಗೆ ಗೌರವ ನೀಡದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಹಾಗಾಗಿ ಪರಭಾಷಿಕರಿಗೆ ಲೈಸೆನ್ಸ್ ನೀಡಬಾರದು. ಜೊತೆಗೆ ಸ್ಥಳೀಯರೊಂದಿಗೆ ಗಲಾಟೆ ನಡೆಸುತ್ತಿದ್ದು ಕೂಡಲೇ ಬಿಹಾರಿ, ಪಶ್ಚಿಮ ಬಂಗಾಳದ ಪರಭಾಷಿಕರ ಹಾವಳಿಯನ್ನು ತಪ್ಪಿಸಬೇಕು ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಮತ್ತು ತಾಲ್ಲೂಕು ಎಂಬ್ರಾಯಿಡರಿ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು ಪಟ್ಟಣದ ಪುರಸಭಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಮೀರ್, ಕಾರ್ಮಿಕರ ಘಟಕದ ಅಧ್ಯಕ್ಷ ದಯಾನಂದರಾವ್, ಗೌರವಾಧ್ಯಕ್ಷ ಅಮ್ಜದ್, ಸಲ್ಮಾನ್ಖಾನ್, ಮುತ್ತಲೀಫ್, ಸಂತೇಬಾಚಹಳ್ಳಿ ಮಂಜುನಾಥ್, ಆಟೋ ಘಟಕದ ಅಧ್ಯಕ್ಷ ವಾಸುದೇವ್, ತಾಲ್ಲೂಕು ಎಂಬ್ರಾಯಿಡರಿ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಮಹಾದೇವ್, ಕಾರ್ಯದರ್ಶಿ ಕೆ.ಪಿ.ಮಂಜುನಾಥ್, ಖಜಾಂಚಿ ಕಿರಣ್ಕುಮಾರ್, ಸಹ ಕಾರ್ಯದರ್ಶಿ ಅನ್ಸರ್ ಅಹಮದ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಲೀಲಾವತಿ, ರಾಜೇಶ್ವರಿಗಿರೀಶ್, ನಾಗೇಶ್, ಡಿ.ಎಸ್.ಲವಣ್ಣ ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ಪುರಸಭಾ ಕಚೇರಿಯ ಮುಂದೆ ಧರಣಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೆ.ಆರ್.ಪೇಟೆ ಪಟ್ಟಣದಲ್ಲಿ ಹತ್ತಾರು ವರ್ಷಗಳಿಂದ ಎಂಬ್ರಾಯಿಡರಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದೇವೆ.
ಜೊತೆಗೆ ತಾಲ್ಲೂಕು ಎಂಬ್ರಾಯಿಡರಿ ಅಂಗಡಿ ಮಾಲೀಕರ ಸಂಘ ನೊಂದಾಯಿಕೊಂಡು ಸಂಘಟಿತರಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ ಆದರೆ ಇತ್ತೀಚೆಗೆ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಬಂದಿರುವ ಹಲವಾರು ಮಂದಿ ಎಂಬ್ರಾಯಿಡರಿ ಕೆಲಸಗಾರರು ಮಾಡುವವರು ಸ್ಪರ್ಧಾತ್ಮಕ ನಿಗಧಿತ ಬೆಲೆಗಿಂತ ತೀರ ಕಡಿಮೆ ಶುಲ್ಕ ಪಡೆದುಕೊಂಡು ಕಳಫೆ ಎಂಬ್ರಾಯಿಡರಿ ಕೆಲಸ ಮಾಡುತ್ತಾ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಇವರ ಮೋಸದ ಕೆಲಸ ತಿಳಿಯದ ಹಲವು ಗ್ರಾಹಕರು ಬಿಹಾರಿಗಳು ಮತ್ತು ಪಶ್ಚಿಮಬಂಗಾಳಿ ವಲಸಿಗರಿಂದ ತೊಂದರೆಗೆ ಒಳಗಾಗಿ ನಮ್ಮ ಸಂಘಕ್ಕೆ ದೂರು ನೀಡುತ್ತಿದ್ದಾರೆ. ಇವರ ದಾಖಲಾತಿಗಳನ್ನು ಪರಿಶೀಲಿಸಬೇಕು.
ಈ ವಲಸಿಗರ ಬಳಿ ಕೇವಲ ಆಧಾರ್ ಕಾರ್ಡ್ ಮಾತ್ರ ಇದೆ. ಇವರು ಬೇರೆ ದೇಶಗಳಿಂದ ಬಂದಿರುವ ಸಾಧ್ಯತೆ ಇದೆ. ಹಾಗಾಗಿ ಇವರ ಬಳಿ ಇರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸಬೇಕು. ಕೇವಲ ಆಧಾರ್ ಕಾರ್ಡ್ ಮಾತ್ರ ಇದ್ದರೆ, ಬೇರೆ ದಾಖಲೆ ಇಲ್ಲದಿದ್ದರೆ ದಯಮಾಡಿ ತಾಲ್ಲೂಕಿನಿಂದ ಹೊರಹಾಕಲು ಪುರಸಭೆ ಮತ್ತು ತಾಲ್ಲೂಕು ಆಡಳಿತ ಸೂಕ್ತ ಕ್ರಮ ವಹಿಸಬೇಕು.

ಬಿಹಾರ್ ಮತ್ತು ಪಶ್ಚಿಮಬಂಗಾಳ ರಾಜ್ಯ ಎಂದು ಹೇಳಿಕೊಳ್ಳುವ ಇವರು ತಮ್ಮ ಬಾಡಿಗೆ ಮನೆಗಳಲ್ಲಿ ಎಂಬ್ರಾಯಿಡರಿ ಕೆಲಸವನ್ನು ಕಳಫೆ ಕೆಲಸ ಮಾಡುವ ಮೂಲಕ ನಮ್ಮ ಸ್ಥಳೀಯ ಎಂಬ್ರಾಯಿಡರಿ ಕೆಲಸಗಾರರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಜೊತೆಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸದೇ ಇರುವ ಕಾರಣ ನಿತ್ಯ ಸ್ಥಳೀಯ ಗ್ರಾಹಕರು ಮತ್ತು ವಲಸಿಗರ ನಡುವೆ ಗಲಾಟೆಗಳು ನಡೆಯುತ್ತಿವೆ. ಹಾಗಾಗಿ ಕೂಡಲೇ ವಲಸಿಗರಿಗೆ ಪುರಸಭಾ ವತಿಯಿಂದ ಪರವಾನಗಿ ನೀಡಬಾರದೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಮೀರ್ ಪುರಸಭಾ ಮುಖ್ಯಾಧಿಕಾರಿಗಳನ್ನು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಮೀರ್, ಕಾರ್ಮಿಕರ ಘಟಕದ ಅಧ್ಯಕ್ಷ ದಯಾನಂದರಾವ್, ಗೌರವಾಧ್ಯಕ್ಷ ಅಮ್ಜದ್, ಸಲ್ಮಾನ್ಖಾನ್, ಮುತ್ತಲೀಫ್, ಸಂತೇಬಾಚಹಳ್ಳಿ ಮಂಜುನಾಥ್, ಆಟೋ ಘಟಕದ ಅಧ್ಯಕ್ಷ ವಾಸುದೇವ್, ತಾಲ್ಲೂಕು ಎಂಬ್ರಾಯಿಡರಿ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಮಹಾದೇವ್, ಕಾರ್ಯದರ್ಶಿ ಕೆ.ಪಿ.ಮಂಜುನಾಥ್, ಖಜಾಂಚಿ ಕಿರಣ್ಕುಮಾರ್, ಸಹ ಕಾರ್ಯದರ್ಶಿ ಅನ್ಸರ್ ಅಹಮದ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಲೀಲಾವತಿ, ರಾಜೇಶ್ವರಿಗಿರೀಶ್, ನಾಗೇಶ್, ಡಿ.ಎಸ್.ಲವಣ್ಣ ಮತ್ತಿತರರ ಭಾಗವಹಿಸಿದ್ದರು. ಪ್ರತಿಭಟನೆಯ ನಂತರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
– ಶ್ರೀನಿವಾಸ್ ಆರ್.
