ಕೆ.ಆರ್.ಪೇಟೆ: ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡು ವುದರಿಂದ ಗ್ರಾಮದ ಹಿತ ಕಾಪಾಡುವುದರ ಜೊತೆಗೆ ಯುವ ಜನತೆಯ ಆರೋಗ್ಯವನ್ನೂ ವೃದ್ಧಿಸಿಕೊಳ್ಳ ಬಹುದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗ್ರಾಮದ ಸ್ನೇಹಜೀವಿ ಯುವಕರ ಬಳಗ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಕ್ಕೆ ಭಾಗವಹಿಸಿದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪರಿಚಯಿಸಿಕೊಂಡು ಟಾಸ್ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು ಕ್ರೀಡೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕತೆ ವೃದ್ಧಿಯಾಗುತ್ತದೆ.

ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕರು ನಾಯಕತ್ವವನ್ನು ಬೆಳೆಸಿ ಕೊಳ್ಳಬಹುದು ಇದರಿಂದ ಸಂಘಟನೆ ರೂಪುಗೊಳ್ಳಲು ನೆರವಾಗತ್ತದೆ. ಕ್ರೀಡೆ ದೈಹಿಕ ಕಸರತ್ತು, ಬುದ್ದಿಶಕ್ತಿಯನ್ನು ಹೆಚ್ಚಿಸ ಬಲ್ಲ ಅನೇಕ ಗ್ರಾಮೀಣ ಆಟಗಳು ಮರೆಯಾಗುತ್ತಿವೆ.ಅನೇಕ ಹಳ್ಳಿಗಾಡಿನ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಸರಿಯಾದ ಪ್ರಚಾರ,ಮಾರ್ಗದರ್ಶನದ ಕೊರತೆಯಿಂದ ಅಂಥ ಪ್ರತಿಭೆಗಳು ಹಳ್ಳಿಗಳಲ್ಲಿಯೇ ಕಮರಿ ಹೋಗುವುದರ ಜೊತೆಗೆ ಮೊಬೈಲ್, ಟಿವಿಯಿಂದ ಇಂದಿನ ಗ್ರಾಮೀಣ ಭಾಗದ ಯುವಕರು ಕ್ರೀಡೆ ಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ದೇವರಸೆಗೌಡ,ಗ್ರಾ.ಪಂ ಮಾಜಿ ಅಧ್ಯಕ್ಷ ದರ್ಶನ್, ಬಂಡಿಹೊಳೆ ಸ್ನೇಹಜೀವಿ ಯುವಕರ ಬಳಗದ ಸದಸ್ಯರಾದ ವೃಥ್ವಿಕ್,ದಿಲೀಪ್,ಚೇತನ್, ಗಗನ್, ಕಾರ್ತೀಕ, ಬೈರ,ಯುವರಾಜ್,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
