ಕೆ ಆರ್ ಪೇಟೆ: ಇಂದಿನ ದಿನಮಾನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದ ಪೌರಾಣಿಕ ನಾಟಕಗಳು ನಶಿಸುತ್ತಿವೆ. ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಕುಪ್ಪಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಕೃಪೋಸಿತ ನಾಟಕ ಮಂಡಳಿ ವತಿಯಿಂದ ಪಿತೃ ಪಕ್ಷದ ಅಂಗವಾಗಿ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮಿಣ ಜನರಿಗೆ ಮನರಂಜನೆಯ ಬಹುಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ನಮ್ಮ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರಿಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು. ಪುರಾಣದ ಪಾತ್ರಗಳ ಮೂಲಕ ಬದುಕಿನ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿಸುತ್ತಾ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದರು. ಇಂದು ಮೊಬೈಲ್ ಸಂಸ್ಕೃತಿ ಎಲ್ಲವನ್ನೂ ಮರೆಮಾಚುತ್ತಿದೆ ಪೌರಾಣಿಕ ನಾಟಕಗಳ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ತಿಳಿಸಿದರು.

ಬಳಿಕ ಮಾತನಾಡಿದ ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ ಗಂಗಾಧರ್ ಪಿತೃಪಕ್ಷ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಹಿರಿಯರನ್ನು ಪೂಜಿಸುವ ಸಂಪ್ರದಾಯಿಕ ಶ್ರೇಷ್ಠವಾದ ಹಬ್ಬ ಇದಾಗಿದೆ.ಇಂದಿನ ಮಕ್ಕಳಿಗೆ ತಾತ, ಮುತ್ತಾತಂದಿರ ಬಗ್ಗೆ ತಿಳಿಯಪಡಿಸಲು ಇದು ಮಹತ್ವದ ಹಬ್ಬ ಜೊತೆಗೆ ಪೌರಾಣಿಕ ನಾಟಕ ಆಯೋಜಿಸಿರುವುದು ಗ್ರಾಮದಲ್ಲಿ ಮತ್ತಷ್ಟು ಹಬ್ಬದ ಕಳೆಯುಚಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಬಸ್ ಸಂತೋಷ್,ಬಂಡಿಹೊಳೆ ಗ್ರಾ. ಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ,ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಜಯರಾಮೇಗೌಡ, ನಿವೃತ್ತ ಶಿಕ್ಷಕ ರಾಮೇಗೌಡ,ಬಂಡಿಹೊಳೆ ಮಾಜಿ ಅಧ್ಯಕ್ಷ ಹಾಲಿ ಗ್ರಾ. ಪಂ ಸದಸ್ಯ ದರ್ಶನ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಸುನಿಲ್,ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸೋಮನಾಯ್ಕ,ಮುಖಂಡರಾದ ವಿಶ್ವನಾಥ್, ಉಮೇಶ್ ನಾಯ್ಕ, ರಂಗಣ್ಣ,ರವೀಂದ್ರ, ರಾಮಯ್ಯ,ಅಲೆನಹಳ್ಳಿ ಕುಮಾರ್, ಪ್ರಸನ್ನ, ಕೆ.ಟಿ ಮಹೇಶ್ ಕುಮಾರ್, ಪ್ರಭಾಕರ್, ಡ್ರಾಮಾ ಮಾಸ್ಟರ್ ಸುನಿಲ್, ಕಲಾವಿದರಾದ ನಂಜುಂಡ, ರಘು ಹೊಸಹೊಳಲು ಸೇರಿದಂತೆ ಕುಪ್ಪಳ್ಳಿ ಗ್ರಾಮಸ್ಥರಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
