ಕೆ.ಆರ್.ಪೇಟೆ: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿ,ಸಮಾಜದಲ್ಲಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವಂತಹ ಶಕ್ತಿ ಶಿಕ್ಷಕನಿಗೆ ಮಾತ್ರ,ಆ ಕೆಲಸವನ್ನ ಚಾಚು ತಪ್ಪದೇ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ಶಿಕ್ಷಕ ಟಿ.ವೆಂಕಟೇಶ್ ರವರ ಮುಂದಿನ ದಿನಗಳಲ್ಲಿ ಅವರ ಚಿಂತನೆ ಸದೃಢ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಶೀಳನೆರೆ ಹೋಬಳಿಯ ಹುಣಸನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ ಶಿಕ್ಷಕ ಟಿ.ವೆಂಕಟೇಶ್ ಅವರಿಗೆ ಶಾಲೆ ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ,ತಮ್ಮ ತಂದೆ ತಾಯಿಯ ಸಮ್ಮುಖದಲ್ಲಿ ಸುಧೀರ್ಘ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿಗೊಂಡುತ್ತಿರುವ ಟಿ.ವೆಂಕಟೇಶ್ ರವರೆ ಅದೃಷ್ಟಶಾಲಿ, ನಿವೃತ್ತಿ ಹೊಂದುವ ಶಿಕ್ಷಕರ ಸೇವೆ ನಮಗೆಲ್ಲ ಮಾದರಿ ನಿವೃತ್ತಿ ಬದುಕು ಸುಖಃಮಯವಾಗಿರಲಿ. ನಿವೃತ್ತಿಯ ನಂತರವೂ ನಿಮ್ಮ ಅನುಭವ ಶೈಕ್ಷಣಿಕ ಕಾಳಜಿ ಇಲಾಖೆಯೊಂದಿಗೆ ಸಂಘದೊಂದಿಗೆ ಸದಾ ಇರಲಿ ಎಂದು ಆಶಿಸಿದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿವೃತ್ತಿ ಸಹ ಶಿಕ್ಷಕ ಟಿ.ವೆಂಕಟೇಶ್ ಗ್ರಾಮಸ್ಥರ ಸಹಕಾರ, ಸಹೋದ್ಯೋಗಿ ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಕಲಿಕಾ ಉತ್ಸಾಹದಿಂದ ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ನಮ್ಮಿಂದ ಪಾಠ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದೇ ಗುರುವಿಗೆ ನೀಡುವ ದೊಡ್ಡ ಕೊಡುಗೆ ಎಂದರು.
ಬಳಿಕ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರು ನಿವೃತ್ತಗೊಂಡ ಟಿ ವೆಂಕಟೇಶ್ ರವರಿಗೆ ದಂಪತಿಗಳಿಗೆ ಹೃದಯಸ್ಪರ್ಶಿಸುವಂತೆ ಅಭಿನಂದಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಮೋಹನ್, ಸಿಆರ್ಪಿಗಳಾದ ಮಂಜುನಾಥ್, ಪ್ರಕಾಶ್, ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂದೀಪ್, ಉಪಾಧ್ಯಕ್ಷೆ ಸೌಮ್ಯ,ಸದಸ್ಯರಾದ ಯೋಗೇಶ್, ಶಿವರಾಜ್,ಚಂದು, ಚೈತ್ರ, ಶೇಖರ್, ಶಿಲ್ಪ, ಶ್ರೀಧರ್, ಪೂಜಾ, ರಾಣಿ, ಸುನಿತ, ಮಹೇಶ್,ಶಿವಣ್ಣ, ಗಂಗಾಧರ್, ರವಿ,ಹಿರಿಯ ಮುಖಂಡ ಪಾಲಕ್ಷ,ಬಸಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕಾಳೆಗೌಡ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಮಹೇಶ್,ಗಂಗಾಧರ್,ಮರೀಗೌಡ,ತಿಂಮೇಗೌಡ, ಕೆಂಪಮ್ಮ, ಬಸವೇಗೌಡ,ಸುಬ್ಬಮ್ಮ, ಸಣ್ಣತಾಯಮ್ಮ,ಜಯಶೀಲ, ಈರೇಗೌಡ ಗಂಗಣ್ಣ ಮಕ್ಕಳ ಪೋಷಕರಿದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
